LATEST NEWS
ಪ್ರಕೃತಿ ಚಿಕಿತ್ಸೆ ನಡುವೆ ಮಾಜಿ ಪ್ರಧಾನಿ ದೇವೇಗೌಡರ ಟೆಂಪಲ್ ರನ್

ಪ್ರಕೃತಿ ಚಿಕಿತ್ಸೆ ನಡುವೆ ಮಾಜಿ ಪ್ರಧಾನಿ ದೇವೇಗೌಡರ ಟೆಂಪಲ್ ರನ್
ಉಡುಪಿ ಮೇ 10: ಇತ್ತೀಚೆಗಷ್ಟೇ ಮಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಪ್ರಕೃತಿ ಚಿಕಿತ್ಸೆ ಮುಗಿಸಿ ವಾಪಾಸಾಗಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರ ಈಗ ಮತ್ತೆ ಐದು ದಿನ ಪ್ರಕೃತಿ ಚಿಕಿತ್ಸೆಗೆ ಉಡುಪಿಗೆ ವಾಪಾಸಾಗಿದ್ದು ಪ್ರಕೃತಿ ಚಿಕಿತ್ಸೆ ನಡುವೆ ಉಡುಪಿ ಜಿಲ್ಲೆಯ ವಿವಿಧ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.
ಇಂದು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರು ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇಂದು ಶುಕ್ರವಾರದ ಮಧ್ಯಾಹ್ನದ ಮಹಾಪೂಜೆಯಲ್ಲಿ ಭಾಗಿಯಾದ ದೇವೇಗೌಡ ದಂಪತಿ, ಮೊಮ್ಮಗನ ಮದುವೆ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ನರೆವೆರಿಸಿದರು.

5 ದಿನಗಳ ಪ್ರಕೃತಿ ಚಿಕಿತ್ಸೆಗಾಗಿ ಉಡುಪಿಗೆ ಆಗಮಿಸಿರುವ ಮಾಜಿ ಪ್ರಧಾನಿ ದೇವೇಗೌಡರು ಮೇ 16 ರ ವರೆಗೆ ಕಾಪುವಿನಲ್ಲಿ ತಂಗಲಿದ್ದಾರೆ.