KARNATAKA
ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಹೃದಯಾಘಾತದಿಂದ ನಿಧನ

ಚಿಕ್ಕಬಳ್ಳಾಪುರ ಎಪ್ರಿಲ್ 15: ಮಾಜಿ ಶಾಸಕ ಜನಪರ ಹೋರಾಟಗಾರ ಜಿ.ವಿ ಶ್ರೀರಾಮರೆಡ್ಡಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಿಪಿಐಎಂ ಪಕ್ಷದಿಂದ ಬಾಗೇಪಲ್ಲಿಯಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕರಾಗಿದ್ದ ಅವಧಿಯಲ್ಲಿ ಉತ್ತಮ ಸಂಸದೀಯ ಪಟು ಎನ್ನಿಸಿಕೊಂಡಿದ್ದರು. ಸಿಪಿಐಎಂ ರಾಜ್ಯ ಕಾರ್ಯದರ್ಶಿಯಾಗಿದ್ದ ವೇಳೆ ರಾಜ್ಯದಲ್ಲಿ ಎಡಪಂಥೀಯ ಚಳುವಳಿಯನ್ನು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಶ್ರೀರಾಮ ರೆಡ್ಡಿಯವರದ್ದು. ಶ್ರೀರಾಮರೆಡ್ಡಿಯವರು ರಾಜಕಾರಣದಲ್ಲಿ ಸಕ್ರೀಯರಾಗಿದ್ದಷ್ಟೂ ದಿನ ಎಡ ಯುವಜನ ಸಂಘಟನೆ, ವಿದ್ಯಾರ್ಥಿ ಸಂಘಟನೆಗಳು, ರೈತ ಸಂಘಟನೆಗಳು ಸಕ್ರಿಯವಾಗಿದ್ದವು.
