Connect with us

LATEST NEWS

ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾಲಯವನ್ನು ರೆಸಾರ್ಟ್ ಆಗಿ ಬಳಸಿಕೊಂಡ ಸಿದ್ದರಾಮಯ್ಯ

ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾಲಯವನ್ನು ರೆಸಾರ್ಟ್ ಆಗಿ ಬಳಸಿಕೊಂಡ ಸಿದ್ದರಾಮಯ್ಯ

ಮಂಗಳೂರು ಜೂನ್ 28: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳ ಶಾಂತಿವನ ಪ್ರಕೃತಿ ಚಿಕಿತ್ಸಾಲಕ್ಕೆ ದಾಖಲಾದ ನಂತರ ಪ್ರಕೃತಿ ಚಿಕಿತ್ಸಾಲಯವನ್ನು ತಮ್ಮ ರಾಜಕೀಯ ಚದುರಂಗಕ್ಕೆ ರೆಸಾರ್ಟ್ ರೀತಿಯಲ್ಲಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹೆಸರಾಂತ ಪುಣ್ಯಕ್ಷೇತ್ರ ಧರ್ಮಸ್ಥಳ ಯಾವಾಗಾಲೂ ರಾಜಕೀಯ ದೂರ ಉಳಿದುಕೊಂಡಿದ್ದು, ಇಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳು ನಡೆಯುವುದಿಲ್ಲ, ಇಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ದೇವಸ್ಥಾನಕ್ಕೆ ಭೇಟಿ ನೀಡಿ ಧರ್ಮಾಧಿಕಾರಿಗಳ ಆಶೀರ್ವಾದ ಪಡೆಯುತ್ತಾರೆ. ಇಡೀ ಧರ್ಮಸ್ಥಳ ರಾಜಕೀಯ ಚಟುವಟಿಕೆಗಳಿಂದ ದೂರವೇ ಉಳಿದಿತ್ತು, ಆದರೆ ಈ ಭಾರಿ ಮಾತ್ರ ಮಾಜಿ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳದ ಶಾಂತಿವನವನ್ನು ತಮ್ಮ ರಾಜಕೀಯ ಚಟುವಟಿಕೆಗಳ ತಾಣವನ್ನಾಗಿ ಬಳಸಿಕೊಂಡರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ 12 ದಿನಗಳ ಕಾಲ ಈ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆರಾಮವಾಗಿ ಇದ್ದು ಫಿಟ್ ಆಗಿ ಹೊರ ಬರಬೇಕೆಂದಿದ್ದ ಸಿದ್ದರಾಮಯ್ಯ ಮಾತ್ರ ಶಾಂತಿವನದ ಒಳಗೂ ರಾಜಕೀಯದ ಚದುರಂಗ ಆಟವಾಡಿದ್ದಾರೆ. ಸಮ್ಮಿಶ್ರ ಸರಕಾರದ ಭವಿಷ್ಯದ ಬಗ್ಗೆ ಇಲ್ಲಿಂದಲೇ ದಿನವೊಂದಕ್ಕೆ ಹೊಸ ಹೊಸ ಬಾಂಬ್ ಗಳನ್ನು ಸಿಡಿಸುತ್ತಾ. ಸಮ್ಮಿಶ್ರ ಸರಕಾರದ ಬುಡವನ್ನೇ ಅಲುಗಾಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಶಾಂತಿವನಕ್ಕೆ ದಾಖಲಾದ ದಿನದಿಂದ ಡಿಸ್ಚಾರ್ಜ್ ಆಗುವ ಇಂದಿನವರೆಗೂ ಶಾಂತಿವನದ ವೈದ್ಯರು, ಸಿಬ್ಬಂದಿ, ರೋಗಿಗಳು ಸೇರಿದಂತೆ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ. ಪ್ರತಿದಿನ ಸಿದ್ದರಾಮಯ್ಯನವರ ಆಪ್ತರು, ಶಾಸಕರುಗಳು, ಬೆಂಬಲಿಗರು ಮತ್ತು ಮಾಧ್ಯಮದವರು ಸೇರಿದಂತೆ ಎಲ್ಲರೂ ಮುಗಿಬಿದ್ದು ಬರುತ್ತಿದ್ದರು.ಶಾಂತಿಯಾಗಿರಬೇಕಾಗಿದ್ದ ಶಾಂತಿವನದಲ್ಲಿ ಅಶಾಂತಿ ಹುಟ್ಟಿಸಿತ್ತು.

ಶಾಂತಿವನದ ಪ್ರಕೃತಿ ಚಿಕಿತ್ಸೆಯ ಈ ತಾಣ ಕಳೆದ ಕೆಲ ದಿನಗಳಿಂದ ರಾಜಕೀಯ ತಾಣವಾಗಿ ಬದಲಾಗಿದೆ. ರಾಜಕೀಯ ಮೇಲಾಟದಿಂದಾಗಿ ಶಾಂತಿನವದ ಆಡಳಿತ ಮಂಡಳಿಯೇ ಕಂಗಾಲಾಗಿದೆ. ಇನ್ನು ಮುಂದೆ ರಾಜಕಾರಣಿಗಳಿಗೆ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡೊದೇ ಬೇಡ ಎನ್ನುವ ತೀರ್ಮಾನಕ್ಕೂ ಬಂದಿದೆ ಎಂದು ಹೇಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *