Connect with us

    BELTHANGADI

    ಗರ್ಡಾಡಿಯಲ್ಲಿ ನೀರು ನಾಯಿಗಳ ಗುಂಪು ಪ್ರತ್ಯೇಕ್ಷ …ಸ್ಥಳೀಯರಲ್ಲಿ ಆತಂಕ‌…!

    ಬೆಳ್ತಂಗಡಿ, ಮೇ 16: ತಾಲೂಕಿನ ಗರ್ಡಾಡಿ ಪ್ರದೇಶದಲ್ಲಿ ನೀರು ನಾಯಿಗಳ ಗುಂಪು ಕಂಡು ಬಂದಿದ್ದು ಸ್ಥಳೀಯರಲ್ಲಿ ಆತಂಕ‌ ಮೂಡಿಸಿದೆ.

    ಗರ್ಡಾಡಿ ಸನಿಹದ ಕುಬಳಬೆಟ್ಟು ಗುತ್ತು ಎಂಬಲ್ಲಿನ ತೋಡಿನಲ್ಲಿ ಸುಮಾರು 25 ಕ್ಕೂ ಹೆಚ್ಚು ನೀರು ನಾಯಿಗಳು ಹರಿದಾಡಿಕೊಂಡು ಬಂದಿರುವ ವಿಡಿಯೋ ವೈರಲ್ ಆಗಿದೆ. ಒಟರ್ ಎಂದು ಕರೆಯಲಾಗುತ್ತಿರುವ ಈ ಪ್ರಾಣಿಗಳು ಮಾಂಸಾಹಾರಿಗಳಾಗಿದ್ದು ಮೀನು, ಏಡಿ ಇತ್ಯಾದಿಗಳನ್ನು ಹಿಡಿದು ತಿನ್ನುತ್ತವೆ.

    ಡಾಬರ್ ಮನ್ ನಾಯಿಯಂತೆ ಕಾಣುವ ಇವುಗಳು ನಾಯಿಮರಿಗಳನ್ನು‌ ಕ್ಷಣಾರ್ಧದಲ್ಲಿ ಹಿಡಿದು ತಿನ್ನಬಲ್ಲುದು. ಎಳೆಯ ಮಕ್ಕಳು‌ ಈ ಪ್ರಾಣಿಗಳ ಸನಿಹ ಹೋದರೆ ಅಪಾಯ ಕಟ್ಟಿಟ್ಟದ್ದು ಎಂದು ಹೇಳಲಾಗುತ್ತಿದೆ.

    ಗುತ್ತು ಮನೆಯ ಸಂಪತ್ ಕುಮಾರ್ ಕೊಂಬ ಎಂಬುವರ ಮನೆ ಸನಿಹ ಶನಿವಾರ ಸಂಜೆ ಇವು ಕಂಡು ಬಂದಿದ್ದು, ಭಾನುವಾರ ವನ್ಯಜೀವಿ, ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಳೆದ ವರ್ಷ ಬಂದ ಪ್ರವಾಹದಲ್ಲಿ ಇವುಗಳು‌ ಕಾಡಿನಿಂದ ಬಂದಿರಬಹುದು ಎಂದು ಹೇಳಲಾಗುತ್ತಿದೆ.

    Video:

    Share Information
    Advertisement
    Click to comment

    You must be logged in to post a comment Login

    Leave a Reply