LATEST NEWS
ನಾವು ಭಟ್ರಿಗೆ ಮಾತು ಕೊಡಲಿಲ್ಲ ಎಂದು ಅಪ್ಪ ಮಕ್ಕಳು ಬಂದು ಕೃಷ್ಣನ ಮುಂದೆ ಪ್ರಮಾಣ ಮಾಡಲಿ – ಈಶ್ವರಪ್ಪ

ಉಡುಪಿ ಮೇ 28: ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಪರಿಷತ್ ಚುನಾವಣೆ ಟಿಕೆಟ್ ನೀಡುತ್ತೇವೆ ಎಂದು ಮಾತು ಕೊಡಲಿಲ್ಲ ಎಂದು ಅಪ್ಪ ಮಕ್ಕಳು ಕೃಷ್ಣನ ಮುಂದೆ ಪ್ರಮಾಣ ಮಾಡಲಿ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ರಘುಪತಿ ಭಟ್ ಗೆ ಶಿವಮೊಗ್ಗ ಉಸ್ತುವಾರಿ ಕೊಡಲಾಗಿತ್ತು, 42 ದಿನ ಶಿವಮೊಗ್ಗ ದ ಹಳ್ಳಿ ಹಳ್ಳಿಯಲ್ಲಿ ಭಟ್ರನ್ನು ಸುತ್ತಿಸಿ ಪ್ರಚಾರ ಮಾಡಿದ್ರು, ರಘುಪತಿ ಭಟ್ ಹೆಂಡತಿ ಮಕ್ಕಳನ್ನು ಬಿಟ್ಟು ರಾತ್ರಿಹಗಲು ಬಿಜೆಪಿಗೆ ಪ್ರಚಾರ ಮಾಡಿದರು. ಈ ವೇಳೆ ನಿಮಗೇ ಪರಿಷತ್ತು ಟಿಕೆಟ್ ಎಂದು ನಂಬಿಸಿ ಕೆಲಸ ಮಾಡಿಸಿದರು ಎಂದ ಅವರು ನಾವು ಭಟ್ರಿಗೆ ಮಾತು ಕೊಡಲಿಲ್ಲ ಎಂದು ಕೃಷ್ಣಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದರು.

ಜಾತಿ ಹಣಬಲದಿಂದ ಟಿಕೆಟ್ ಡಾ. ಧನಂಜಯ ಸರ್ಜಿ ಪಾಲಾಯಿತು, ಪಕ್ಷನಿಷ್ಠೆಯಲ್ಲಿ ಇವರಿಗೆ ರಘುಪತಿ ಭಟ್ ಅವರ ಎಡಗಾಲಿನಷ್ಟು ಬೆಲೆ ಇಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಎಂಬ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಇದು ವಿಜಯೇಂದ್ರನದ್ದು ಅದು ಮುಠ್ಠಾಳತನದ ಹೇಳಿಕೆ ಕೇರಳ ತಮಿಳುನಾಡಿನಲ್ಲಿ ಹಲವಾರು ಬಿಜೆಪಿ ನಾಯಕರು ಒದ್ದಾಡುತ್ತಿದ್ದಾರೆ. ತಮಿಳ್ನಾಡಲ್ಲಿ ಅಣ್ಣಾಮಲೈ ಸಂಘಟನೆಗೆ ಬಿದ್ದು ಒದ್ದಾಡ್ತಾಯಿದ್ದಾರೆ. ಅಣ್ಣಾಮಲೈಗೆ ಯಾವಾಗ ಏನು ಕಾದಿದ್ಯೊ ಗೊತ್ತಿಲ್ಲ ಎಂದರು.
ರಾಯಣ್ಣ ಬ್ರಿಗೇಡ್ ಮೂಲಕ ಹಿಂದುಳಿದ ದಲಿತರನ್ನು ಒಟ್ಟಾಗಿ ಮಾಡಬೇಕು, ಕೂಡಲ ಸಂಗಮ ದೇವ ಸಮಾವೇಶದಿಂದ ಯಡಿಯೂರಪ್ಪ ಸಮಾಧಾನ ಆಗಿರಲಿಲ್ಲ, ಅಮಿತ್ ಶಾ ಬೇಡ ಅಂದದ್ದಕ್ಕೆ ಬರ್ಕಾಸ್ತು ಮಾಡಿದೆ. ಮತ್ತೆ ರಾಯಣ್ಣ ಬ್ರಿಗೇಡ್ ರಚನೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.