LATEST NEWS
ತ್ರಿಶೂರ್ ಪೂರಂ ಗೆ ಗ್ರೀನ್ ಸಿಗ್ನಲ್…ಎಲ್ಲಾ ವೈಭವದೊಂದಿಗೆ ಮತ್ತೆ ಪೂರಂ
ತ್ರಿಶೂರ್: ಕೊರೊನಾದಿಂದಾಗಿ ಕಳೆದ ವರ್ಷ ನಡೆಯದ ತ್ರಿಶೂರ್ ಪೂರಂ ನ್ನು ಈ ಬಾರಿ ಎಲ್ಲಾ ರೀತಿಯ ವೈಭವದೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ.
ಇಂದು ಕೇರಳದ ಮುಖ್ಯ ಕಾರ್ಯದರ್ಶಿ ಪಿ.ಜೆ.ಜಾಯ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತ್ರಿಶೂರ್ ಪೂರಂ ಅನ್ನು ಈ ಬಾರಿ ತನ್ನ ಎಲ್ಲಾ ವೈಭವದಿಂದ ಆಯೋಜಿಸಲು ಅನುಮತಿ ನೀಡಲಾಗಿದೆ.
ಪ್ರತಿವರ್ಷ ಕೇರಳದಲ್ಲಿ ನಡೆಯುವ ತ್ರಿಶೂರ್ ಪೂರಂ ಗೆ ದೇಶ ಸೇರಿದಂತೆ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಪಾಲ್ಗೊಳ್ಳುತ್ತಿದ್ದರು. ಕಳೆದ ಬಾರಿ ಕೊರೊನಾ ಹಿನ್ನಲೆ ತ್ರಿಶೂರ್ ಪೂರಂ ನ್ನು ರದ್ದುಗೊಳಿಸಲಾಗಿತ್ತು. ಈ ಬಾರಿ ಕೂಡ ಪೂರಂ ನಡೆಯುವುದು ಅನುಮಾನ ಎಂದು ಹೇಳಲಾಗಿತ್ತು, ಆದರೆ ಈಗ ಸರಕಾರ ಅನುಮತಿ ನೀಡಿರುವುದು ಪೂರಂ ಅಭಿಮಾನಿಗಳು ಮತ್ತು ಭಾಗವಹಿಸುವ ದೇವಾಲಯಗಳ ಪ್ರತಿನಿಧಿಗಳಿಗೆ ಸಂತೋಷ ಉಂಟುಮಾಡಿದೆ.
ಇನ್ನು ಸಾರ್ವಜನಿಕ ಮತ್ತು ದೇವಸ್ವಮ್‌ಗಳ ಬೇಡಿಕೆಯಂತೆ ಈ ಬಾರಿ ಪೂರಂ ನಡೆಸಲಾಗುವುದು, ಆದರೆ ಕೋವಿಡ್ ಪ್ರೋಟೋಕಾಲ್ ಜಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಎಸ್.ಶಾನವಾಸ್ ಹೇಳಿದರು. ಪೂರಂ ಪ್ರದರ್ಶನಕ್ಕೆ ಪ್ರವೇಶಿಸಲು ಇ-ಟಿಕೆಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದ ಅವರು . ನಗರ ಪೊಲೀಸರು ಇ-ಟಿಕೆಟಿಂಗ್ ನಿರ್ವಹಿಸಲಿದ್ದಾರೆ.
ಈ ವರ್ಷ ಏಪ್ರಿಲ್ 23 ರಂದು ಪೂರಂ ನಡೆಯಲಿದೆ. ಈ ಹಿನ್ನಲೆ ಪೂರಂ ನ ಆಚರಣೆಗಳು ಧ್ವಜಾರೋಹಣದೊಂದಿಗೆ ಏಳು ದಿನಗಳ ಮೊದಲು ಪ್ರಾರಂಭವಾಗುತ್ತವೆ.