DAKSHINA KANNADA
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಕ್ಲರ್ಕ್ ನ ಬೇಜವಬ್ದಾರಿ ವರ್ತನೆ..ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು
ಪುತ್ತೂರು ಮಾರ್ಚ್ 17: ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರ್ತವ್ಯದ ಮೇರೆಗೆ ಆಗಮಿಸಿದ ಶ್ರವಣ ತಪಾಸಣಾ ಶಿಬಿರದ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲದೆ ಅವಾಚ್ಯವಾಗಿ ನಿಂದಿಸಿದ ಆರೋಗ್ಯ ಕೇಂದ್ರದ ಕ್ಲರ್ಕ್ ವಿರುದ್ದ ಜಿಲ್ಲಾ ಆರೋಗ್ಯಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ಬಡ ರೋಗಿಗಳ ಶ್ರವಣ ತಪಾಸಣೆಗೆ ಆಗಮಿಸಿದ್ದ ಆರೋಗ್ಯ ಸಿಬ್ಬಂದಿಗಳಿಗೆ ಅದೇ ಆರೋಗ್ಯ ಕೇಂದ್ರದಲ್ಲಿ ಕ್ಲರ್ಕ್ ಕೆಲಸ ನಿರ್ವಹಿಸುವ ಫೌಲ್ ಮಸ್ಕರೇನಿಯಸ್ ಎಂಬವರು ಕರ್ತವ್ಯಕ್ಕೆ ಅಡ್ಡಿ ಪಡಿಸಿದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಸಿಬ್ಬಂದಿಗಳಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ, ಈ ಹಿನ್ನಲೆ ತಪಾಸಣೆಗ ಆಗಮಿಸಿದ್ದ ಸಿಬ್ಬಂದಿಗಳು ತಪಾಸಣೆಗೆ ನಡೆಸದೆ ಮರಳಿದ್ದಾರೆ.
ಈ ಹಿನ್ನಲೆ ದಕ್ಷಿಣ ಕನ್ನಡ ಎನ್. ಪಿ. ಪಿ. ಸಿ. ಡಿ. ಕಾರ್ಯಕ್ರಮದ ಶೋಭಿತಾ, ಕಾವ್ಯಶ್ರೀ ಅವರು ಆರೋಗ್ಯ ಕೇಂದ್ರ ಕ್ಲರ್ಕ್ ಫೌಲ್ ಮಸ್ಕರೇನಿಯಸ್ ಅವರ ಬೇಜವಬ್ದಾರಿ ವರ್ತನೆ ಬಗ್ಗೆ ಜಿಲ್ಲಾ ಆರೋಗ್ಯಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ದೂರಿನ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಬುಧವಾರ ಆಸ್ಪತ್ರೆಗೆ ಬೇಟಿ ನೀಡಿದ ಮೆಡಿಕಲ್ ಟೀಮ್ ಜತೆಗೆ ಘರ್ಷಣೆ ಮಾಡಿದ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆಯನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.