KARNATAKA
ದುಷ್ಕರ್ಮಿಗಳಿಂದ ಆನೆಗೆ ಗುಂಡು ಸ್ಥಳದಲ್ಲಿ ಹೆಣ್ಣಾನೆ ಸಾವು

ಪಿರಿಯಾಪಟ್ಟಣ, ಜನವರಿ 28: ತಾಲ್ಲೂಕಿನ ಸುಳುಗೋಡು ಗ್ರಾಮದಲ್ಲಿ ದುಷ್ಕರ್ಮಿಗಳು ಆನೆಗೆ ಗುಂಡು ಹೊಡೆದಿದ್ದು ಸ್ಥಳದಲ್ಲಿ ಹೆಣ್ಣಾನೆ ಸಾವನ್ನಪ್ಪಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಕಾಡಂಚಿನ ಗ್ರಾಮಗಳಾದ ಕೋಗಿಲವಾಡಿ, ಸುಳಗೋಡು, ಕಾಳತಿಮ್ಮನಹಳ್ಳಿ ಇತ್ಯಾದಿ ಗ್ರಾಮಗಳಲ್ಲಿ ಪ್ರತಿನಿತ್ಯ ಆನೆಗಳ ಹಾವಳಿ ಹೆಚ್ಚಾಗಿದ್ದು ರೈತರು ಬೆಳೆದ ಬೆಳೆಗಳನ್ನು ಆನೆಗಳ ಹಿಂಡು ನಾಶಪಡಿಸುತ್ತಿದ್ದು ಅನೇಕ ಬಾರಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರುಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದು ಇದನ್ನು ಸಹಿಸದ ದುಷ್ಕರ್ಮಿಗಳು ನಾಡ ಬಂದೂಕಿನಿಂದ ಗುಂಡು ಹಾರಿಸಿ ಆನೆಯನ್ನು ಹತ್ಯೆಗೈದಿರುವ ಘಟನೆ

ತಾಲ್ಲೂಕಿನ ಸುಳುಗೋಡು ಗ್ರಾಮದಲ್ಲಿ ಜರುಗಿದೆ ಬುಧವಾರ ರಾತ್ರಿ 9ಗಂಟೆಯ ಸಂದರ್ಭದಲ್ಲಿ ಆನೆಗಳ ಹಿಂಡು ಜಮೀನಿಗೆ ಲಗ್ಗೆ ಇಟ್ಟಿದ್ದು ಇದನ್ನು ತಡೆಯಲು ಹೋದ ರೈತರ ಮೇಲೆ ದಾಳಿ ಮಾಡಲು ಯತ್ನಿಸಿರುವ ಆನೆಗಳ ಹಿಂಡಿನ ಮೇಲೆ ಯಾರೋ ಅಪರಿಚಿತರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದ್ದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ