Connect with us

  KARNATAKA

  ಕೇರಳ – ಬೆಚ್ಚಿಬಿಳಿಸುವ ವಿಡಿಯೋ ಮಾವುತನನ್ನು ತುಳಿದು ಸಾಯಿಸಿದ ಆನೆ

  ಕೇರಳ ಜೂನ್ 22: ಕೇರಳದಲ್ಲಿ ದಾರುಣ ಘಟನೆಯೊಂದರಲ್ಲಿ ಮಾವುತನೊಬ್ಬನನ್ನು ಆನೆ ತುಳಿದು ಕೊಂದಿದೆ. ಕೇರಳದ ಇಡುಕ್ಕಿಯಲ್ಲಿ ಅಕ್ರಮ ಆನೆ ಸಫಾರಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿ ಕೇಂದ್ರದ ವಿರುದ್ದ ದೂರು ದಾಖಲಿಸಿದ್ದಾರೆ.


  ಸಾವನಪ್ಪಿದ ಆನೆ ಮಾವುತನನ್ನು ನೀಲೇಶ್ವರಂ ನಿವಾಸಿ ಬಾಲಕೃಷ್ಣನ್ (62) ಎಂದು ಗುರುತಿಸಲಾಗಿದೆ. ಇಡುಕ್ಕಿಯ ಅಡಿಮಲಿ ಬಳಿಯ ಕಲ್ಲರ್‌ನಲ್ಲಿರುವ ಖಾಸಗಿ ಆನೆ ಸಫಾರಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರನ್ನು ಸಫಾರಿಗೆ ಕರೆದೊಯ್ಯಲು ಆನೆಯನ್ನು ರೆಡಿ ಮಾಡುವ ವೇಳೆ ಸಿಟ್ಟಾದ ಆನೆ ಮಾವುತನನ್ನು ತುಳಿದು ಸಾಯಿಸಿದೆ. ದಾಳಿಯಿಂದ ಪ್ರವಾಸಿಗರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮಾವುತರ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.


  @ManyFaces_Death ಎಂಬ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಇಂದು (ಜೂ.22)ರಂದು ವಿಡಿಯೋ ಹಂಚಿಕೊಳ್ಳಲಾಗಿದ್ದು, ಕೆಲವೇ ಗಂಟೆಗಳಲ್ಲಿ 3.3 ಮಿಲಿಯನ್​​ ಅಂದರೆ 30 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವಿಡಿಯೋ ಒಂದು ಲಕ್ಷ ನಿಮ್ಮನ್ನು ಬೆಚ್ಚಿ ಬೀಳಿಸುವುದಂತೂ ಖಂಡಿತಾ.

   

  Share Information
  Advertisement
  Click to comment

  You must be logged in to post a comment Login

  Leave a Reply