Connect with us

DAKSHINA KANNADA

ಕಲ್ಮಕಾರು – ಕಾಡಾನೆ ದಾಳಿಗೆ ಸಿಲುಕಿ ಸಾವನಪ್ಪಿದ ಕೃಷಿಕ

ಪುತ್ತೂರು ಎಪ್ರಿಲ್ 7: ಕಾಡಾನೆ ದಾಳಿಗೆ ಸಿಲುಕಿ ಕೃಷಿಕನೊಬ್ಬ ಸಾವನಪ್ಪಿರುವ ಘಟನೆ ಸುಳ್ಯ ತಾಲೂಕಿನ ಕಲ್ಮಕಾರು ಎಂಬಲ್ಲಿ ನಡೆದಿದೆ.


ಮೃತ ಕೃಷಿಕನನ್ನು ಶಿವರಾಮ ಮಂಟೆಕಜೆ ಎಂದು ಗುರುತಿಸಲಾಗಿದ್ದು, ಇವರು ಕಾಡಿನಂಚಿನಲ್ಲಿರುವ ಕೃಷಿ ತೋಟದಲ್ಲಿ ಪೈಪ್ ಲೈನ್ ಸರಿ ಮಾಡುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿದೆ.

ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.