LATEST NEWS
ಚೌಕಿದಾರ್ ಶೇರ್ ಹೈ ಸ್ಟಿಕ್ಕರ್ ಇದ್ದ ಕಾರನ್ನು ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು
ಚೌಕಿದಾರ್ ಶೇರ್ ಹೈ ಸ್ಟಿಕ್ಕರ್ ಇದ್ದ ಕಾರನ್ನು ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು
ಉಡುಪಿ ಎಪ್ರಿಲ್ 5: ಕಾರಿನ ಹಿಂದೆ ಚೌಕಿದಾರ್ ಶೇರ್ ಹೈ ಸ್ಟಿಕ್ಕರ್ ತೆಗೆಯಲು ಮುಂದಾದ ಚುನಾವಣಾ ಅಧಿಕಾರಿಗಳಿಗೆ ಕಾರಿನ ಮಾಲಿಕರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ವಾಹನದ ಹಿಂದೆ ಪಕ್ಷಗಳ ಸ್ಲೋಗನ್ ನನ್ನು ತೆಗೆಯಲು ಜಿಲ್ಲಾ ಚುನಾವಣಾಧಿಕಾರಿ ಆದೇಶಸಿದ್ದರು. ಉಡುಪಿ ಜಿಲ್ಲೆಯ ಕಾರ್ಕಳ ನಗರ ಭಾಗದಲ್ಲಿ ವಕೀಲರೊಬ್ಬರು ಕಾರಿನ ಹಿಂದೆ ಚೌಕಿದಾರ್ ಶೇರ್ ಹೈ ಸ್ಟಿಕ್ಕರ್ ಅಳವಡಿಸಿದ್ದ ಹಿನ್ನಲೆಯಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಸ್ಟಿಕ್ಕರ್ ತೆಗೆಯಲು ಸೂಚನೆ ನೀಡಿದ್ದಾರೆ. ಆದರೆ ಅಧಿಕಾರಿಗಳ ಸೂಚನೆ ನೀರ್ಲಕ್ಷಿಸಿದ ಹಿನ್ನಲೆಯಲ್ಲಿ ವಾಹನ ಮಾಲಿಕ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ವಾಹನ ಮಾಲೀಕರಾದ ವಿಪುಲ್ ತೇಜ್ ಎಂಬವರು ಸ್ಟಿಕ್ಕರ್ ತೆಗೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾನೂನು ರೀತಿಯಲ್ಲಿ ನೋಟಿಸ್ ನೀಡಿ ನಂತರ ಸ್ಟಿಕ್ಕರ್ ತೆಗೆಯುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಅಧಿಕಾರಿಗಳು ಕಾರಿನ ಮಾಲೀಕರ ಮಾತನ್ನು ಕೇಳಲು ತಯಾರಿಲ್ಲದೆ. ಕಾರನ್ನು ವಶಕ್ಕೆ ಪಡೆದಿದ್ದಾರೆ ಎಂದು ವಾಹನ ಮಾಲೀಕ ವಿಪುಲ್ ತೇಜ್ ಆರೋಪಿಸಿದ್ದಾರೆ.