ಪುಲ್ವಾಮಾ ದಾಳಿ ಬಗ್ಗೆ ಮಾಹಿತಿ ಎಡಗೈಯಲ್ಲಿ ನಾಲ್ಕು, ಬಲೈಗೆಯಲ್ಲಿ ನಾಲ್ಕು ಲಿಂಬೆ ಹಿಡ್ಕೊಂಡು ರೇವಣ್ಣ ಭವಿಷ್ಯ ಹೇಳಿರಬೇಕು

ಉಡುಪಿ ಎಪ್ರಿಲ್ 5: ಭಾರತದ ಸೈನಿಕರ ಮೇಲೆ ಉಗ್ರರು ದಾಳಿ ಮಾಡುವ ವಿಚಾರ ತನಗೆ 2 ವರ್ಷದ ಹಿಂದೆಯೇ ಗೊತ್ತಿತ್ತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ವಿಧಾನಪರಿಷತ್ ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರ ಅಣ್ಣ ರೇವಣ್ಣ ಹೀಗಂತ ಭವಿಷ್ಯ ಹೇಳಿದ್ರಾ… ಎಡಗೈಯಲ್ಲಿ ನಾಲ್ಕು, ಬಲೈಗೆಯಲ್ಲಿ ನಾಲ್ಕು ಲಿಂಬೆ ಹಿಡ್ಕೊಂಡು ಭವಿಷ್ಯ ಹೇಳಿರಬಹುದು.

ಮುಖ್ಯಮಂತ್ರಿ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ವರ್ತಿಸಲಿ ಎಂದು ಹೇಳಿದ ಅವರು ಪುಲ್ವಾಮ ಘಟನೆ ಬಗ್ಗೆ ಗೊತ್ತಿದ್ರೆ ಎರಡು ವರ್ಷದ ಮೊದಲೇ ಹೇಳಬೇಕಿತ್ತು, ಈಗ ಚುನಾವಣೆ ಸಂದರ್ಭದಲ್ಲಿ ಹೇಳುವ ಅಗತ್ಯ ಏನಿತ್ತು ಎಂದು ಹೇಳಿದ ಅವರು.

ರಾಜ್ಯದಲ್ಲಿ ಮೈತ್ರಿಯೆಂಬ ತೇಪೆಯೊಳಗೆ ಎಲ್ಲಾ ಒಡೆದಿದೆ. ಮಂಡ್ಯ ಗೆಲ್ಲುವುದಿಲ್ಲ ಎನ್ನುವುದು ಸಿಎಂ ಗೆ ಗೊತ್ತಾಗಿದೆ ಅಲ್ಲದೆ ತುಮಕೂರು, ಹಾಸನ ಕಷ್ಟವಿದೆ ಅಂತ ಸಿಎಂ ಗೆ ಅರಿವಾಗಿದೆ.

ಜೆಡಿಎಸ್ ನ ಕೌಟುಂಬಿಕ ರಾಜಕಾರಣದ ಕೊನೆಯ ದಿನಗಳು ನಡೆಯುತ್ತಿದೆ ಎಂದು ಹೇಳಿದರು.