LATEST NEWS
ಕುಂದಾಪುರದಲ್ಲಿ ಚುನಾವಣಾಧಿಕಾರಿಗಳ ಮೇಲೆ ಹಲ್ಲೆ : ಇಬ್ಬರ ಬಂಧನ

ಕುಂದಾಪುರದಲ್ಲಿ ಚುನಾವಣಾಧಿಕಾರಿಗಳ ಮೇಲೆ ಹಲ್ಲೆ : ಇಬ್ಬರ ಬಂಧನ
ಉಡುಪಿ, ಎಪ್ರಿಲ್ 10 : ಚುನಾವಣಾಧಿಕಾರಿಗಳಿಗೆ ಹಲ್ಲೆ ನಡೆಸಲು ಯತ್ಯಸಿದ ಘಟನೆ ಉಡುಪಿಯ ಕುಂದಾಪುರದಲ್ಲಿ ಸಂಭವಿಸಿದೆ.
ಅನುಮತಿ ಇಲ್ಲದೆ ಮದ್ಯ ಮಾರಾಟ ಮಾರಾಟ ಮತ್ತು ಪಾರ್ಟಿ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕ ದೂರು ಬಂದ ಹಿನ್ನಲೆಯಲ್ಲಿ ಕುಂದಾಪುರ ಕೋಟೇಶ್ವರದ ಸಹನಾ ಹೋಟೆಲ್ ಮತ್ತು ವಸತಿ ಗೃಹಕ್ಕೆ ಕುಂದಾಪುರ ಸಹಾಯಕ ಕಮಿಶನರ್ ಭೂಬಾಲನ್ ಹಾಗೂ ಅಧಿಕಾರಿ ಪೂವಿತಾ ಅವರು ಕಾರ್ಯಾಚರಣೆ ನಡೆಸಿದ್ದರು.

ಈ ಸಂದರ್ಭದಲ್ಲಿ ಹೊಟೇಲ್ ಮಾಲಕರಿಗೂ ಹಾಗೂ ಅಧಿಕಾರಿಗಳಿಗೂ ಮಾತಿನ ಚಕಮಕಿ ನಡೆದು, ಹೊಟೇಲ್ ಮಾಲಕರು ಚುನಾವಣಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು, ಹಲ್ಲೆಗೂ ಯತ್ನಿಸಿದ್ದರು.
ಸಹಾಯಕ ಕಮಿಶನ್ ನ ಗನ್ ಮ್ಯಾನ್ ಕೂಡಲೇ ಮಧ್ಯೆ ಪ್ರವೇಶಿಸಿ ಹಲ್ಲೆ ಯತ್ನವನ್ನು ತಪ್ಪಿಸಿದ್ದರು.
ಅಪಾಯದ ಮುನ್ಸೂಚನೆ ಅರಿತ ಅಧಿಕಾರಿಗಳು ಪೋಲಿಸರನ್ನು ಕರೆಯಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಮತ್ತಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಸಂಬಂಧ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.