LATEST NEWS
ನಿರ್ಮಾಣ ಹಂತದ ಕಟ್ಟಡ ಲಿಪ್ಟ್ ಕುಸಿದು 8 ಮಂದಿ ಸಾವು…!!

ಗಾಂಧೀನಗರ: ನಿರ್ಮಾಣ ಹಂತದ ಕಟ್ಟದ ಲಿಪ್ಟ್ ಕುಸಿದ ಪರಿಣಾಮ 8 ಮಂದಿ ಕಾರ್ಮಿಕರು ಸಾವನಪ್ಪಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.
ಗುಜರಾತ್ ವಿಶ್ವವಿದ್ಯಾನಿಲಯದ ಬಳಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿಯ ಕಟ್ಟಡದ ಲಿಪ್ಟ್ ಕುಸಿದಿದ್ದು, ಕುಸಿತದ ಸಂದರ್ಭ 8 ಮಂದಿ ಕಾರ್ಮಿಕರಿದ್ದರು ಎಂದು ಹೇಳಲಾಗಿದೆ. ಅದರಲ್ಲಿ 7 ಮಂದಿ ಸಾವನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮಾಧ್ಯಮಗಳಲ್ಲಿ ಬಂದ ಮಾಹಿತಿಯನ್ನು ತಿಳಿದು ಅಗ್ನಿಶಾಮಕದಳ ಸ್ಥಳಕ್ಕೆ ತೆರಳಿದೆ ಎಂದು ತಿಳಿದು ಬಂದಿದೆ.

ನಮಗೆ ಘಟನೆಯ ಬಗ್ಗೆ ಯಾವುದೇ ಏಜೆನ್ಸಿ ಅಥವಾ ಡೆವೆಲಪರ್‌ಗಳಿಂದ ಕರೆ ಬಂದಿರಲಿಲ್ಲ. ಮಾಧ್ಯಮಗಳ ವರದಿ ಹಾಗೂ ಪ್ರತಿನಿಧಿಗಳಿಂದ ಬಂದ ದೂರವಾಣಿ ಮೂಲಕ ಘಟನೆ ಬಗ್ಗೆ ತಿಳಿದುಕೊಂಡೆವು. ಬಳಿಕ ಘಟನೆ ಬಗ್ಗೆ ಪರಿಶೀಲಿಸಲು ಸ್ಥಳಕ್ಕೆ ಬಂದೆವು ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯೇಶ್ ಖಾಡಿಯಾ ತಿಳಿಸಿದ್ದಾರೆ.
ಇದು ಖಾಸಗಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವಾಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.