LATEST NEWS
ದಸರಾ ರಜೆ ವಿಷಯದಲ್ಲಿ ಸರಕಾರಿ ಆದೇಶಕ್ಕೆ ಕ್ಯಾರೆ ಅನ್ನದ ಶಿಕ್ಷಣ ಸಂಸ್ಥೆಗಳು

ದಸರಾ ರಜೆ ವಿಷಯದಲ್ಲಿ ಸರಕಾರಿ ಆದೇಶಕ್ಕೆ ಕ್ಯಾರೆ ಅನ್ನದ ಶಿಕ್ಷಣ ಸಂಸ್ಥೆಗಳು
ಮಂಗಳೂರು ಅಕ್ಟೋಬರ್ 13:ಮಂಗಳೂರು ದಸರಾ ರಜೆಯನ್ನು ನೀಡದ ಶಿಕ್ಷಣ ಸಂಸ್ಥೆಗಳ ವಿರುದ್ದ ಶಾಸಕ ವೇದವ್ಯಾಸ್ ಕಾಮತ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಕೂಡಲೇ ಸರಕಾರದ ಆದೇಶವನ್ನು ಪಾಲಿಸುವಂತೆ ತಾಕೀತು ಮಾಡಿದ್ದಾರೆ.
ಮಂಗಳೂರ ದಸರಾ ಸಂದರ್ಭದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಕೊಡುವ ರಜೆಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಈ ಹಿಂದೆ ರಾಜ್ಯ ಸರಕಾರದ ಸಚಿವರುಗಳಾಗಿದ್ದ ಎನ್ ಮಹೇಶ್ ಹಾಗೂ ಸಚಿವ ಜಿ ಟಿ ದೇವೆಗೌಡರಿಗೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು ಟಿ ಖಾದರ್ ಅವರು ಅಕ್ಟೋಬರ್ 7 ರಿಂದ 21 ರ ತನಕ ಮಕ್ಕಳಿಗೆ ಕೊಡುವ ರಜೆಯಲ್ಲಿ ಯಾವುದೇ ಕಡಿತ ಮಾಡಬಾರದು ಎಂದು ಸೂಚನೆ ಹೊರಡಿಸಿದ್ದರು. ಆದರೆ ರಾಜ್ಯ ಸರಕಾರದ ಭಾಗವಾಗಿರುವ ಸಚಿವರ ಆದೇಶದ ಹೊರತಾಗಿಯೂ ಮಂಗಳೂರು ನಗರ ದಕ್ಷಿಣದ ಕೆಲವು ಶಾಲೆಗಳಲ್ಲಿ ರಜೆಯನ್ನು ಕೊಡದೇ ಆಡಳಿತ ಮಂಡಳಿಯವರು ಸರಕಾರದ ಆಜ್ಞೆಯನ್ನು ದಿಕ್ಕರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಮಕ್ಕಳ ಪೋಷಕರು, ಅಧ್ಯಾಪಕರು ಮತ್ತು ನಾಗರಿಕರು ಈ ಶಾಸಕ ವೇದವ್ಯಾಸ ಕಾಮತ್ ಅವರಿಗೆ ದೂರು ನೀಡಿ ಈ ಬಗ್ಗೆ ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ.
ಈ ಹಿನ್ನಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ವೇದವ್ಯಾಸ್ ಕಾಮತ್ ತಡ ಮಾಡದೇ ಅಂತಹ ಶಿಕ್ಷಣ ಸಂಸ್ಥೆಗಳು ಶೀಘ್ರದಲ್ಲಿ ಸರಕಾರದ ಸುತ್ತೋಲೆಯನ್ನು ಪಾಲಿಸಿ ಮಕ್ಕಳಿಗೆ ರಜೆ ನೀಡಬೇಕೆಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
VIDEO