DAKSHINA KANNADA
ಅಕ್ಟೋಬರ್ 20 ರಂದು ಪುತ್ತೂರಿನಲ್ಲಿ ಆರ್ಥಿಕ ಜಿಹಾದ್ ಸಭೆ….
ಪುತ್ತೂರು, ಅಕ್ಟೋಬರ್ 18: ಅಭಿನವ ಮಿತ್ರ ಮಂಡಳಿ ಪುತ್ತೂರು ಮತ್ತು ಹಿಂದೂ ಜನಜಾಗೃತಿ ಸಮಿತಿ ಸಹಯೋಗದಲ್ಲಿ ಭಾರತದ ಮೇಲೆ ಹಲಾಲ್ ಆರ್ಥಿಕ ವ್ಯವಸ್ಥೆಯ ದುಷ್ಪರಿಣಾಮಗಳನ್ನು ತಿಳಿಸುವ ಜನಜಾಗೃತಿ ಸಭೆಯನ್ನು ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಅಕ್ಟೋಬರ್ 20 ರಂದು ಆಯೋಜಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಾಧಿಕಾರಿ ಚಂದ್ರ ಮುಗೇರ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ FSSI ಅಥವಾ FDI ಸಂಸ್ಥೆಗಳು ಗುಣಮಟ್ಟದ ಪ್ರಮಾಣಪತ್ರವನ್ನು ನೀಡುತ್ತಿದ್ದು, ಇದರ ನಡುವೆ ಇಸ್ಲಾಮೀ ಸಂಸ್ಥೆಗಳು ಹಲಾಲ್ ಪ್ರಮಾಣಪತ್ರವನ್ನು ಎಲ್ಲಾ ಗೃಹೋಪಯೋಗಿ ವಸ್ತುಗಳಿಗೆ ನೀಡಲಾಗುತ್ತಿದೆ.
ಇದೊಂದು ಭಾರತದ ಮೇಲಿನ ಆರ್ಥಿಕ ಜಿಹಾದ್ ಆಗಿದ್ದು, ಈ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಷಡ್ಯಂತ್ರ ನಡೆಯುತ್ತಿದೆ. ಈ ಕುರಿತು ಅಧ್ಯಯನ ನಡೆಸಿರುವ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ ಈ ವಿಚಾರವಾಗಿ ಸಭೆಯಲ್ಲಿ ವಿಚಾರ ಮಂಡಿಸಲಿದ್ದಾರೆ ಎಂದು ಅವರು ತನ್ನ ಅಧ್ಯಯನದ ಮೂಲಕ ಕಂಡುಕೊಂಡ ವಿಚಾರಗಳುಳ್ಳ ಪುಸ್ತಕವನ್ನೂ ಈ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.