DAKSHINA KANNADA
ಸುಳ್ಯದಲ್ಲಿ ಮತ್ತೆ ದೊಡ್ಡ ಶಬ್ದದೊಂದಿಗೆ ಕಂಪಿಸಿದ ಭೂಮಿ
ಸುಳ್ಯ, ಜುಲೈ 15: ಸುಳ್ಯ ಮತ್ತು ಕೊಡಗು ಗಡಿ ಭಾಗದ ಕೆಲವಡೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ಜನ ಹೇಳಿಕೊಂಡಿದ್ದಾರೆ.
ಕೊಡಗು-ಸುಳ್ಯ ಗಡಿ ಪ್ರದೇಶವಾದ ಚೆಂಬು, ಸಂಪಾಜೆ, ಗೂನಡ್ಕ, ಅರಂತೋಡು, ತೊಡಿಕಾನ ಮುಂತಾದೆಡೆ ಭೂ ಕಂಪನದ ಅನುಭವವಾಗಿದೆ. ಬೆಳಗ್ಗೆ 10.09ರ ವೇಳೆಗೆ ಭೂಮಿಯ ಒಳಗಿನಿಂದ ಭಾರೀ ಶಬ್ದ ಕೇಳಿಸಿದ್ದು, ಸೋಫಾ, ಮಂಚ, ಪಾತ್ರೆ, ಪರಿಕರಗಳು ಅಲುಗಾಡಿವೆ ಎಂಬುದಾಗಿ ಜನರು ಮಾಹಿತಿ ನೀಡಿದ್ದಾರೆ. ವಾಹನದಲ್ಲಿ ಸಂಚರಿಸುತ್ತಿದ್ದವರಿಗೂ ಗುಂಡಿಗೆ ಬಿದ್ದಂತ ಅನುಭವ ಉಂಟಾಗಿದೆ.