LATEST NEWS
ದಲಿತ ಕಾಲೋನಿಗೆ ನೀರಿಗಾಗಿ DYFI ಪ್ರತಿಭಟನೆ
ದಲಿತ ಕಾಲೋನಿಗೆ ನೀರಿಗಾಗಿ DYFI ಪ್ರತಿಭಟನೆ
ಮಂಗಳೂರು ಮಾರ್ಚ್ 26: ಉಳ್ಳಾಲ ಪುರಸಭಾ ವ್ಯಾಪ್ತಿಯ ಅಬ್ಬಂಜರ ಪ್ರದೇಶದ ದಲಿತ ಕಾಲೊನಿಯ ನಿವಾಸಿಗಳು ಶುದ್ಧ ಕುಡಿಯುವ ನೀರಿಗೆ ಆಗ್ರಹಿಸಿ ಹಾಗೂ ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬವನ್ನು ತೆರವುಗೊಳಿಸ ಒತ್ತಾಯಿಸಿ ಇಂದು DYFI ಹಾಗೂ ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕರರನನ್ನು ಪುರಸಭೆಯ ಆಡಳಿತ ಪುರಸಭೆಯ ಆವರಣ ಪ್ರವೇಶಿಸದಂತೆ ಗೇಟನ್ನು ಹಗ್ಗದಿಂದ ಕಟ್ಟಿದ್ದು ಇದನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಒಳ ಪ್ರವೇಶಿಸಿದರು. ಪ್ರತಿಭಟನಾ ನಿರತರು ಪುರಸಭೆಯ ಅಧ್ಯಕ್ಷರು ಸ್ಥಳಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರೂ ಸ್ಥಳಕ್ಕೆ ಆಗಮಿಸದೇ ಇದ್ದ ಕಾರಣ ನೇರವಾಗಿ ಅಧ್ಯಕ್ಷರ ಕಛೇರಿಗೆ ಮುತ್ತಿಗೆ ಹಾಕಿ ಅಧ್ಯಕ್ಷರ ಚೇಂಬರಿನ ಒಳಗೆ ಪ್ರತಿಭಟನೆ ಮುಂದುವರಿಯಿತು ಈ ಸಂಧರ್ಭ ಪೊಲೀಸರು ತಡೆದರೂ ಡಿವೈಎಫ್ಐ ಕಾರ್ಯಕರ್ತರು ಅಧ್ಯಕ್ಷರ ಚೇಂಬರ್ ನುಗ್ಗುವಲ್ಲಿ ಯಶಸ್ವಿಯಾದರು.