Connect with us

DAKSHINA KANNADA

ಕಾನ-ಕುಳಾಯಿ ರೈಲ್ವೇ ಸೇತುವೆ ದುರಸ್ಥಿಗೆ ಆಗ್ರಹಿಸಿ ಡಿವೈಎಫ್ ಐ ನಿಂದ ರಸ್ತೆ ತಡೆ

ಮಂಗಳೂರು,ಆಗಸ್ಟ್.03: ಕುಸಿಯುವ ಭೀತಿಯಲ್ಲಿರುವ ಕಾನ ಕುಳಾಯಿ ರೈಲ್ವೇ ಮೇಲ್ ಸೇತುವೆ ದುರಸ್ಥಿಗೆ ಒತ್ತಾಯಿಸಿ ಡಿವೈಎಫ್ ಐ ಕಾನ ಮತ್ತು ಕುಳಾಯಿ ಘಟಕಗಳ ನೇತ್ರತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಫ್ ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಸೇತುವೆ ಮೇಲಿನ ಹೊಂಡ ಗುಂಡಿಗಳು ವಾಹನ ಸವಾರರ ಜೀವ ಹಿಂಡುತ್ತಿವೆ. ಜನಪ್ರತಿನಿಧಿಗಳು ಕಂಪೆನಿಯವರ ಜುಲೇಬಿ ಆಸೆಗಾಗಿ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಆಪಾದಿಸಿದರು. ಸಾರ್ವಜನಿಕ ರಸ್ತೆಯನ್ನು ಕಂಪೆನಿಗಳಿಗೆ ಬೃಹತ್ ಘನ ವಾಹನಗಳು ಯಥೇಚ್ಚವಾಗಿ ಬಳಕೆ ಮಾಡಿರುವುದರಿಂದ ಸೇತುವೆ ಹಾಳಾಗಿರುವುದು ಮಾತ್ರವಲ್ಲ ಬುಲೆಟ್ ಟ್ಯಾಂಕರುಗಳ ಸಂಚಾರ ಇಲ್ಲಿನ ಜನರನ್ನು ಭಯಭೀತಗೊಳಿಸಿದೆ. ಸಂಚಾರ ಪೋಲೀಸರು ಕಾನ ಕುಳಾಯಿ ರಸ್ತೆಯಲ್ಲಿ ಆರು ಚಕ್ರಕ್ಕಿಂತ ಮೇಲ್ಪಟ್ಟ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು.
ಜಲ್ಲಾ ಕಾರ್ಯದರ್ಶಿ ಸಂತೋಷ್ ಮಾತನಾಡುತ್ತಾ ಮೇಯರ್ ಕವಿತಾ ಸನಿಲ್ ಪ್ರಚಾರಕ್ಕಾಗಿ ದಾಳಿಗಳನ್ನು ನಿಲ್ಲಿಸಿ ಜನರ ನೈಜ ಸಮಸ್ಯೆಗಳ ಗಮನ ಹರಿಸಲಿ ಎಂದರು. ಜನರಿಂದ ಸಂಗ್ರಹಿಸಿದ ತೆರಿಗೆ ಹಣ ಜನರ ಕಲ್ಯಾಣಕ್ಕೆ ವಿನಿಯೋಗಿಸಲು ನಗರಪಾಲಿಕೆ ವಿಫಲವಾಗಿದೆ ನಗರದ ಅಭಿವೃದ್ಧಿ ಎಂದರೆ ನಗರದ ಹೃದಯ ಭಾಗದ ಅಭಿವೃದ್ಧಿ ಅಲ್ಲ ಬದಲಾಗಿ ಸಮಗ್ರ ಅಭಿವೃದ್ಧಿ ಆಗ ಬೇಕಾಗಿದೆ. ಅದಕ್ಕಾಗಿ ಡಿವೈಎಫ್ ಐ ಜನರನ್ನು ಸಂಘಟಿಸಿ ಹೋರಾಟ ನಡೆಸಲಿದೆ ಎಂದರು.
ಮಂಗಳೂರು ಉತ್ತರ ಸಮಿತಿಯ ಉಪಾಧ್ಯಕ್ಷ ಶ್ರೀನಾಥ್ ಕುಲಾಲ್, ಸುರತ್ಕಲ್ ವಲಯ ಅಧ್ಯಕ್ಷ ಅಜ್ಮಲ್ ಅಹಮದ್, ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯ ಅಬೂಬಕ್ಕರ್ ಬಾವ, ಮುಖಂಡರಾದ ಬಿ.ಕೆ ಮಕ್ಸೂದ್, ಶ್ರೀನಿವಾಸ ಹೊಸಬೆಟ್ಟು, ಸಂತೋಷ್ ಕುಳಾಯಿ, ಹನೀಫ್ ಕುಳಾಯಿ,ಇಬ್ರಾಹಿಂ ಕಾನ, ಹಂಝ ಮೈಂದಗುರಿ ಮತ್ತಿತರರು ಪ್ರತಿಭಟನೆ ನೇತ್ರತ್ವ ವಹಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *