DAKSHINA KANNADA
ಸಮಾಜದಲ್ಲಿ ಗೊಂದಲ ಹುಟ್ಟು ಹಾಕಿದವರೇ ಇದನ್ನು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ – ಡಿವಿ ಸದಾನಂದ ಗೌಡ
ಪುತ್ತೂರು ಎಪ್ರಿಲ್ 02: ಧರ್ಮಾಚರಣೆ ವ್ಯಕ್ತಿಯ ವೈಯುಕ್ತಿಕ ವಿಚಾರವಾಗಿದ್ದು, ರಾಜ್ಯದಲ್ಲಿ ಯಾವ ಧರ್ಮದ ಮೇಲೂ ಪ್ರಹಾರ ಮಾಡುವ ಕೆಲಸ ನಡೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ದೇಶದ ಸಂವಿಧಾನ ಒಪ್ಪದ, ನ್ಯಾಯಾಲಯಗಳ ಆದೇಶ ಒಪ್ಪದ ಒಂದು ವರ್ಗವಿದ್ದು, ತನ್ನದೇ ಗೂಂಡಾಗಿರಿ ಮೂಲಕ, ಭಯೋತ್ಪಾದಕರಿಗೆ ಬೆಂಬಲ ನೀಡುವ ಕೆಲಸ ಇವುಗಳಿಂದ ನಡೆಯುತ್ತಿದೆ . ಈ ರೀತಿಯ ಗೂಂಡಾಗಿರಿ ನಡೆದಾಗ ಸಮಾಜ ಇದಕ್ಕೆ ಪ್ರತಿಕ್ರಿಯಿಸಿದೆ ಅಷ್ಟೇ, ಸಮಾಜದಲ್ಲಿ ಈ ರೀತಿಯ ಗೊಂದಲ ಹುಟ್ಟು ಹಾಕಿದವರೇ ಇದನ್ನು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ ಬುದ್ಧಿವಾದ ಹೇಳುವ ಮೊದಲು ತಮ್ಮ ವರ್ತನೆ ಸರಿಮಾಡಿಕೊಳ್ಳೋದು ಉತ್ತಮ ಎಂದು ರಾಜ್ಯದಲ್ಲಿ ನಡೆಯುತ್ತಿರುವ ಆರ್ಥಿಕ ನಿಶೇಧ ಮತ್ತು ಹಲಾಲ್ ವಿರೋಧ ಸಮರ್ಥಿಸಿಕೊಂಡರು.
ಹಲಾಲ್, ಜಟ್ಕಾ ಕಟ್ ಎಲ್ಲವೂ ಬಿಜೆಪಿಯ ತಂತ್ರ ಎನ್ನುವ ಮಾಜಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿವಿ ಸದಾನಂದ ಗೌಡ ಕುಮಾರಸ್ವಾಮಿಯವರಿಗೆ ಇನ್ನೊಬ್ಬರ ಮೇಲೆ ಆರೋಪಿಸೋದೇ ಕೆಲಸ, ಹಿಂದೆ ಸಿದ್ಧರಾಮಯ್ಯ, ಡಿ.ಕೆ.ಶಿ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆರೋಪ ಮಾಡುತ್ತಿದ್ದರು ಈಗ ಬಿಜೆಪಿ ವಿರುದ್ಧ ಮಾತಾನಾಡುತ್ತಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಎನ್ನೋದು ಮುಗಿದ ಅಧ್ಯಾಯ, ಆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣೆಗೆಯನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಕುಮಾರಸ್ವಾಮಿಯವರು ಸ್ಥಿರತೆ ಕಳೆದು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಆರೋಪಗಳಿಗೆ ಬಿಜೆಪಿ ಪ್ರತಿಕ್ರಿಯೆ ನೀಡೋದಿಲ್ಲ ಎಂದರು.