DAKSHINA KANNADA
ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಹಾನೆಸ್ಟಿ ಹಾಗೂ ಸಿನ್ಸಿಯಾರಿಟಿ ಅರ್ಥಕಳೆದುಕೊಂಡಿದೆ – ಡಿವಿ ಸದಾನಂದ ಗೌಡ
ಪುತ್ತೂರು ಮಾರ್ಚ್ 24 : ಪ್ರಧಾನಿ ನರೇಂದ್ರ ಮೋದಿಯವರು ಪರಿಕಲ್ಪನೆಯಂತೆ ಪಕ್ಷ ಪರಿವಾರದಿಂದ ಮುಕ್ತವಾಗಬೇಕು, ಭ್ರಷ್ಟಾಚಾರದಿಂದ ಮುಕ್ತವಾಗಬೇಕು ಆದರೆ ರಾಜ್ಯದಲ್ಲಿರುವ ಪಕ್ಷದ ಜವಬ್ದಾರಿ ಹೊತ್ತವ ಕೆಲವರು ನರೇಂದ್ರ ಮೋದಿಯವರ ಈ ಮೂರು ಪರಿಕಲ್ಪನೆಗೆ ಸರಿ ಹೊಂದಿಲ್ಲ ಎಂದು ಡಿವಿ ಸದಾನಂದ ಗೌಡ ಹೇಳಿದರು.
ಪುತ್ತೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು ನರೇಂದ್ರಯವರನ್ನ ಫಾಲೋ ಮಾಡಿಕೊಂಡು ಉಳಿದವರು ಮುಂದವರಿಯಬೇಕು, ನರೇಂದ್ರ ಮೋದಿಯವ್ರು ದೆಹಲಿಯಲ್ಲಿ ಮಾತ್ರ ಸೀಮಿತವಾದ್ರೆ ಆಗೋದಿಲ್ಲ, ಎಲ್ಲಾ ರಾಜ್ಯಗಳಲ್ಲೂ ನರೇಂದ್ರ ಮೋದಿಯವರಂತೆ ಉಳಿದವರು ಕೆಲಸ ಮಾಡಬೇಕು, ನರೇಂದ್ರ ಮೋದಿ ಹೇಳಿದಂತೆ ಪರಿವಾರವದದಿಂದ ಮುಕ್ತರಾಗಬೇಕು, ಭ್ರಷ್ಟಾಚಾರದಿಂದ ಮುಕ್ತರಾಗಬೇಕು, ಜಾತಿವಾದದಿಂದ ಮುಕ್ತರಾಗಬೇಕೆಂಬುದು ನರೇಂದ್ರ ಮೋದಿಯವರ ಪರಿಕಲ್ಪನೆ ಅದು ಈ ಚುನಾವಣೆಯಲ್ಲೇ ನರೇಂದ್ರ ಮೋದಿಯವರ ಪರಿಕಲ್ಪನೆ ಆಗಬೇಕಿತ್ತು. ಆದ್ರೆ ರಾಜ್ಯದಲ್ಲಿರುವಂತ ಜವಾಬ್ದಾರಿ ಹೊತ್ತ ಕೆಲವರು ನರೇಂದ್ರ ಮೋದಿಯ ಈ ಮೂರು ಪರಿಕಲ್ಪನೆಗೆ ಸರಿಹೊಂದಲ್ಲ ಎಂದರು.
ನಾನು ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದೆ ಆದರೆ ರಾಜ್ಯದ ಕೆಲ ನಾಯಕರು, ಮಾಜಿ ಮುಖ್ಯಮಂತ್ರಿ, ಮಾಜಿ ಉಪಮುಖ್ಯಮಂತ್ರಿ, ಮಾಜಿ ಮಂತ್ರಿಗಳೆಲ್ಲ ರಾಜ್ಯಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದರು , ಇವರೆಲ್ಲ ನೀವು ಲೋಕಸಭಾ ಚುನಾವಣೆ ಸ್ಪರ್ಧಿಸಬೇಕು ಎಂದ ಕಾರಣ ಅದಕ್ಕೆ ನಾನೂ ಕೂಡ ಸ್ಪಷ್ಟವಾಗಿ ಯಸ್ ಎಂದಿದ್ದೆ. ಆದರೆ ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಹಾನೆಸ್ಟಿ ಹಾಗೂ ಸಿನ್ಸಿಯಾರಿಟಿ ಅರ್ಥಕಳೆದುಕೊಂಡಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೆ ಎಲ್ಲಾ ನೋವುಗಳನ್ನು ನುಂಗಿ ಕೂರುತ್ತೇನೆ ಎಂದರು.