LATEST NEWS
ಖಾಸಗಿ ಆಸ್ಪತ್ರೆಗೆ ಡ್ಯೂಟಿಗೆ ಪುಲ್ ಟೈಟ್ ಆಗಿ ಬಂದ ಪಿಜಿ ವೈದ್ಯ – ವಿಡಿಯೋ ವೈರಲ್
ಮಂಗಳೂರು, ಸೆಪ್ಟೆಂಬರ್ 22: : ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕೆಲಸದಲ್ಲಿರುವ ಯುವ ಪಿಜಿ ವೈದ್ಯ ರಾತ್ರಿ ವೇಳೆ ಕುಡಿದು ಕರ್ತವ್ಯಕ್ಕೆ ಹಾಜರಾದ ಘಟನೆ ನಡೆದಿದ್ದು, ರಾತ್ರಿ ವೇಳೆ ಕುಡಿದು ಟೈಟ್ ಆಗಿದ್ದ ವೈದ್ಯನಿಗೆ ರೋಗಿಗಳ ಸಂಬಂಧಿಕರು ವಿಡಿಯೋ ಮಾಡಿ ತರಾಟೆಗೆತ್ತಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಯುವ ವೈದ್ಯ ಕುಡಿದು ಎಲ್ಲಿಯೋ ಬಿದ್ದು ಬಟ್ಟೆಯೆಲ್ಲಾ ಸಂಪೂರ್ಣ ಕೆಸರು ಮಣ್ಣು ಮೆತ್ತಿಕೊಂಡಿದೆ. ಅದೇ ರೀತಿಯಲ್ಲಿ ಡಾಕ್ಟರ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ಒಳಗಿನ ಮೂಲೆಯಲ್ಲಿ ಕುಳಿತಿದ್ದ ವ್ಯಕ್ತಿಯನ್ನು ರೋಗಿಯ ಸಂಬಂಧಿಕರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಪ್ರಶ್ನಿಸಿದ್ದಾರೆ. ಸೆಕ್ಯುರಿಟಿ ಬಳಿ ಕೇಳಿದಾಗ, ಆತ ಡ್ಯೂಟಿ ಡಾಕ್ಟರ್ ಎಂದು ಹೇಳುವುದು ವಿಡಿಯೋದಲ್ಲಿದೆ.
ರಾತ್ರಿ ಮಳೆಯ ನಡುವೆ ಕುಡಿದು ಯುವ ವೈದ್ಯನೊಬ್ಬ ನೇರವಾಗಿ ಆಸ್ಪತ್ರೆಗೆ ಬಂದಿದ್ದ ಎನ್ನಲಾಗಿದೆ. ಮಂಗಳೂರು ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡುತ್ತಿದ್ದು ಮೆಡಿಕಲ್ ಕಾಲೇಜು ಆಸ್ಪತ್ರೆಯ ಅವಸ್ಥೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
You must be logged in to post a comment Login