LATEST NEWS
ನಿಷೇಧಿತ ಡ್ರಗ್ ಸೇವೆನೆ -ಓಟಗಾರ್ತಿ ದ್ಯುತಿ ಚಾಂದ್ ತಾತ್ಕಾಲಿಕ ಅಮಾನತು
ಚೆನ್ನೈ ಜನವರಿ 19: ಡ್ರಗ್ ಸೇವನೆ ಆರೋಪದ ಮೇಲೆ ಭಾರತದ ಓಟಗಾರ್ತಿ ದ್ಯುತಿ ಚಾಂದ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ದ್ಯುತಿ ಚಾಂದ್ ಅವರಿಗೆ ಪಾಸಿಟಿವ್ ದೃಢಪಟ್ಟಿದೆ. ದ್ಯುತಿ ಚಾಂದ್ ಅವರನ್ನು ಪರಿಕ್ಷೇಗೆ ಒಳಪಡಿಸಿದಾಗ ಕ್ರೀಡೆಗಳಲ್ಲಿ ಕಾರ್ಯಕ್ಷಮತೆಯ ವರ್ಧನೆಗಾಗಿ ಬಳಸುವ ನಿಷೇಧಿತ ಪದಾರ್ಥಗಳಾದ ಅನಾಬೊಲಿಕ್ ಸ್ಟೆರಾಯ್ಡ್ ಬಳಸಿದ್ದಾರೆ. ಜೊತೆಗೆ ಸ್ನಾಯು ಮತ್ತು ಮೂಳೆಗಳ ಬೆಳವಣಿಗೆಗೆ ಸಹಾಯಕವಾಗುವ ಆಂಡ್ರೊಜೆನ್ ಬಳಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ.
ನಿಷೇಧಿತ ಡ್ರಗ್ ಸೇವೆನೆ ಆರೋಪದ ಮೇಲೆ ತಾವು ಅಮಾನತುಗೊಂಡಿರುವ ವರದಿಯನ್ನು ತಳ್ಳಿಹಾಕಿದ 100 ಮೀ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ದ್ಯುತಿ ಚಾಂದ್ ಅವರು, ಆ ಬಗ್ಗೆ ಇದುವರೆಗೆ ಯಾರಿಂದಲೂ ಅಂತಹ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ.