DAKSHINA KANNADA
ಪುತ್ತೂರಿನಲ್ಲಿ ಆತಂಕ ಸೃಷ್ಠಿಸಿದ ದೂಳಿನ ಮಳೆ

ಪುತ್ತೂರಿನಲ್ಲಿ ಆತಂಕ ಸೃಷ್ಠಿಸಿದ ದೂಳಿನ ಮಳೆ
ಪುತ್ತೂರು ಜೂನ್ 30: ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಈ ಮಳೆಯ ನಡುವೆ ಧೂಳಿನ ಮಳೆಯೂ ಸುರಿದಿದೆ. ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಪರಿಸರದಲ್ಲಿ ನಿನ್ನೆ ರಾತ್ರಿ ಸುಮಾರು 8 ಗಂಟೆಯಿಂದ 10 ಗಂಟೆ ವರೆಗೆ ಧೂಳಿನ ಮಳೆ ಬಿದ್ದಿದೆ. ಕೇವಲ ಧೂಳು ಮಾತ್ರ ಆಕಾಶದಿಂದ ಬೀಳುತ್ತಿರುವುದನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಈ ವಿಶೇಷ ಮಳೆಯಿಂದಾಗಿ ಪರಿಸರದ ತುಂಬೆಲ್ಲಾ ಬೂದಿಯ ವಾಸನೆ ಹರಡಿತ್ತು.