LATEST NEWS
ಲಾಕ್‌ಡೌನ್ ನಡುವೆ ರಷ್ಯನ್ ಪ್ರಜೆಯಿಂದ ಕೋವಿಡ್ ಜಾಗೃತಿ ಜೊತೆ ಭಗವದ್ಗೀತೆ, ರಾಮಾಯಣ ಮಾರಾಟ

ಉಡುಪಿ, ಮೇ 11 : ಕೋವಿಡ್ ಲಾಕ್‌ಡೌನ್ ನಡುವೆ ನಗರದ ರಥ ಬೀದಿಯಲ್ಲಿ ರಷ್ಯನ್ ಪ್ರಜೆಯೊಬ್ಬರು ಕೋವಿಡ್ ಕುರಿತು ಜಾಗೃತಿ ಜೊತೆಗೆ ಭಗವದ್ಗೀತೆ, ರಾಮಾಯಣ ಪುಸ್ತಕಗಳನ್ನು ವಿಭಿನ್ನ ರೀತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಕೃಷ್ಣಮಠ ಮತ್ತು ಅಷ್ಟ ಮಠಗಳ ಬಳಿ ಸೈಕಲ್ನಲ್ಲಿ ಓಡಾಡುತ್ತಾ ಕೋತಿಯ ಮುಖವಾಡ ಧರಿಸಿ ರಷ್ಯಾ ಮೂಲದ ಸತ್ಯ ಪ್ರಕಾಶ್ ಗ್ರಂಥಗಳ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಕೋವಿಡ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಇಸ್ಕಾನ್ ಸಂಸ್ಥೆಯ ಸದಸ್ಯರಾಗಿರುವ ಇವರು, ಕಳೆದ 20 ವರ್ಷಗಳಿಂದ ಉಡುಪಿಯಲ್ಲಿ ಇದ್ದುಕೊಂಡು ಧರ್ಮ ಜಾಗೃತಿಯ ಗ್ರಂಥಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಂಗ್ಲಿಷ್, ಹಿಂದಿಯ ಜೊತೆ ಸ್ವಲ್ಪ ಕನ್ನಡದಲ್ಲೂ ಮಾತನಾಡುತ್ತಾರೆ.
ಇಂಗ್ಲಿಷ್, ಹಿಂದಿಯ ಜೊತೆ ಸ್ವಲ್ಪ ಕನ್ನಡದಲ್ಲೂ ಮಾತನಾಡುತ್ತಾರೆ. ಜಾಗೃತಿ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು ಮಹಾಮಾರಿ ಕೊರೊನ ಇಡೀ ವಿಶ್ವಕ್ಕೆ ಆವರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ರಥಬೀದಿಗೆ ಬರುವ ಜನರಿಗೆ ಧಾರ್ಮಿಕ ಪುಸ್ತಕಗಳನ್ನು ಕೊಡುವ ಜೊತೆಗೆ ಮಾಸ್ಕ್ ಧರಿಸಿ ಎಂಬ ಜನಜಾಗೃತಿ ಮೂಡಿಸುತ್ತಿದ್ದೇನೆ. ಹನುಮಂತ ದೇವರ ರೂಪವನ್ನು ಹೋಲುವ ಮಾಸ್ಕ್ ಧರಿಸಿದ್ದೇನೆ ಎಂದು ಹೇಳಿದ್ದಾರೆ.