Connect with us

LATEST NEWS

ಶಿರೂರು ಮಠದ ನೂತನ ಶ್ರೀಗಳ ಮೊದಲ ಪರ್ಯಾಯಕ್ಕೆ ಬಾಳೆ ಮುಹೂರ್ತ

ಉಡುಪಿ ಡಿಸೆಂಬರ್ 06: ಉಡುಪಿ ಶ್ರೀ ಕೃಷ್ಣ ಮಠದ ಅಷ್ಟ ಮಠಗಳಲ್ಲಿ ಒಂದಾಂದ ಶಿರೂರು ಮಠದ ನೂತನ ಯತಿಗಳ 2025 ರಲ್ಲಿ ನಡೆಯಲಿರುವ ಮೊದಲ ಪರ್ಯಾಯಕ್ಕೆ ಬಾಳೆ ಮುಹೂರ್ತ ನಡೆಸುವ ಮೂಲಕ ಇಂದು ಅನ್ನ ಬ್ರಹ್ಮನ ಸೇವೆಗೆ ಚಾಲನೆ ನೀಡಲಾಗಿದೆ.


ಪುತ್ತಿಗೆ ಮಠದ ಪರ್ಯಾಯ ಮಹೋತ್ಸವ ನಡೆಯುತ್ತಿದ್ದು, 2025 ಜನವರಿ ತಿಂಗಳಲ್ಲಿ ಶಿರೂರು ಮಠ ಶ್ರೀ ಕೃಷ್ಣ ಪೂಜಾಧಿಕಾರವನ್ನು ಪಡೆಯುತ್ತದೆ. ಶಿರೂರು ಪರ್ಯಾಯಕ್ಕೆ ಪೂರ್ವಭಾವಿಯಾಗಿ ನಡೆಯುವ ಮೊಟ್ಟಮೊದಲ ಬಾಳೆ ಮುಹೂರ್ತ ಇಂದು ನಡೆಯಿತು. ಅನ್ನ ದಾಸೋಹಕ್ಕೆ ಬೇಕಾದ ಪ್ರತಿಯೊಂದು ವಸ್ತುಗಳ ಜೋಡಣೆ ಮಾಡುವುದು ಈ ಪೂರ್ವಭಾವಿ ಮುಹೂರ್ತಗಳ ಉದ್ದೇಶ. ಇಂದು ನಡೆದ ಬಾಳೆ ಮುಹೂರ್ತದಲ್ಲಿ, ಸ್ವತಹ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಉಪಸ್ಥಿತರಿದ್ದು ಪರ್ಯಾಯದ ಯಶಸ್ವಿಗೆ ವಿಶೇಷ ಪ್ರಾರ್ಥನೆ ಮಾಡಿದರು. ಮಠದ ಭಕ್ತರ ಜೊತೆಗೂಡಿ ಮೆರವಣಿಗೆಯಲ್ಲಿ ತೆರಳಿ ಪೂರ್ಣಪ್ರಜ್ಞ ಕಾಲೇಜು ಆವರಣದ ಮಠದ ಜಾಗದಲ್ಲಿ ಬಾಳೆ ಗಿಡಗಳನ್ನು ನೆಟ್ಟರು. ಮುಂದಿನ ಒಂದು ವರ್ಷಗಳ ಕಾಲ ಇಲ್ಲಿನ ಬಾಳೆ ತೋಟದಲ್ಲಿ ಸಂಗ್ರಹವಾಗುವ ಎಲೆ ಹಾಗೂ ಫಲ ವಸ್ತುಗಳನ್ನು ಪರ್ಯಾಯ ಸಂದರ್ಭದಲ್ಲಿ ಅನ್ನದಾಸೋಹಕ್ಕೆ ಬಳಸುವುದು ಪ್ರತೀತಿ…


ಈ ಹಿಂದೆ ಮಠಾಧೀಶರಾಗಿದ್ದ ಶ್ರೀ ಲಕ್ಷ್ಮಿ ವರತೀರ್ಥರು, ಅನೇಕ ವಿವಾದಗಳ ನಡುವೆ ಅಸುನೀಗಿದ ನಂತರ, ಕೆಲಕಾಲ ಶಿರೂರು ಮಠಕ್ಕೆ ಯಾವುದೇ ವಾರಿಸುದಾರರು ಇರಲಿಲ್ಲ. ಆಬಳಿಕ ವೇದವರ್ಧನ ತೀರ್ಥರನ್ನು ಶಿರೂರು ಮಠದ ಮಠಾಧಿಪತಿಯಾಗಿ ನಿಯೋಜಿಸಲಾಗಿದೆ. 2025 ಜನವರಿ 18ರಂದು ವೇದವರ್ಧನ ತೀರ್ಥರ ಮೊದಲ ಶ್ರೀ ಕೃಷ್ಣ ಪರ್ಯಾಯ ನಡೆಯಲಿದೆ. ಅನ್ನ ವಿಠಲನ ಆರಾಧಕರಾಗಿರುವ ಶಿರೂರು ಮಠದ ಭಕ್ತರು, ಅನ್ನ ಬ್ರಹ್ಮನ ಆರಾಧನೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಇಂದು ಬಾಳೆ ಮುಹೂರ್ತ ಕ್ಕೂ ಮುನ್ನ, ಕೃಷ್ಣ, ಮುಖ್ಯಪ್ರಾಣ ದರ್ಶನ ಹಾಗೂ ಚಂದ್ರಮೌಳೇಶ್ವರ ಅನಂತೇಶ್ವರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಳೆದ ಎಂಟು ಶತಮಾನದಿಂದ ಶ್ರೀ ಕೃಷ್ಣನ ಪೂಜಾ ಕೈಂಕರ್ಯ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪರಂಪರೆಯಾಗಿ ನಡೆದು ಬಂದಿದೆ. ಎಳೆಯ ವಯಸ್ಸಿನಲ್ಲಿ ಶ್ರೀ ಕೃಷ್ಣನ ಪೂಜೆಯ ಅಧಿಕಾರವನ್ನು ಪಡೆಯಲಿರುವ ವೇದವರ್ಧನ ತೀರ್ಥರ ಬಗ್ಗೆ ಭಕ್ತರಲ್ಲಿ ಬಹು ನಿರೀಕ್ಷೆಗಳಿವೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *