LATEST NEWS
ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ- ಗ್ರಾಮಸ್ಥರಿಂದ ವಿರೋಧ
ಉಡುಪಿ ಮೇ 28: ಉಡುಪಿಯ ಬೊಮ್ಮರಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಪಾಪುಜೆ ಎಂಬಲ್ಲಿ ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಪಂಚಾಯತ್ ಯೋಜನೆ ರೂಪಿಸಿದ್ದು ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಈ ಪ್ರದೇಶದಲ್ಲಿ ಡಂಪಿಂಗ್ ಯಾರ್ಡ್ ಮಾರ್ಡಲು ಯೋಜನೆ ರೂಪಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ನಂತರ ಯೋಜನೆಯನ್ನು ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ಪಾಪುಜೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಲು ಸ್ಥಳೀಯ ಪಂಚಾಯತ್ ಯೋಜನೆ ರೂಪಿಸಿದ್ದು ಯಾವುದೇ ಕಾರಣಕ್ಕೆ ತ್ಯಾಜ್ಯ ವಿಲೇವಾರಿ ಘಟಕ ಮಾಡಲು ಬಿಡುವುದಿಲ್ಲ ಅಂತ ಗ್ರಾಮಸ್ಥರು ಹೇಳಿದ್ದಾರೆ.
ಈ ಪ್ರದೇಶಲ್ಲಿ ಸುಮಾರು 84ಕ್ಕೂ ಅಧಿಕ ಮಿಕ್ಕಿದ ಮನೆಗಳು ಇದ್ದು 300ಕ್ಕೂ ಅಧಿಕ ಜನರು ವಾಸವಾಗಿದ್ದಾರೆ.ತ್ಯಾಜ್ಯ ಘಟಕ ನಿರ್ಮಾಣ ಮಾಡಿದರೆ ಪರಿಸರ ಮಾಲಿನ್ಯ ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಪಕ್ಕದಲ್ಲಿಯೇ ಸುವರ್ಣಾ ನದಿ ಹರಿಯುತ್ತಿದ್ದು ಇಲ್ಲಿಯ ನೀರು ಮಣಿಪಾಲ ಉಡುಪಿಗೆ ಸರಬರಾಜು ಆಗುತ್ತಿದೆ.
ಸ್ಥಳದಲ್ಲೇ ಬ್ರಹ್ಮಸ್ಥಾನದ ಗುಡಿ ಇದ್ದು ಒಂದು ವೇಳೆ ಇಲ್ಲಿ ಘಟಕ ನಿರ್ಮಾಣ ಆದರೆ ಪರಿಸರ ಹಾಳಾಗುವುದರ ಜೊತೆಗೆ ಧಾರ್ಮಿಕ ಭಾವನೆಗೂ ಧಕ್ಕೆ ಬರಲಿದೆ. ಆದ್ದರಿಂದ ಪಂಚಾಯತ್ ಜನವಸತಿ ಇಲ್ಲದ ಪ್ರದೇಶದಲ್ಲಿ ಘಟಕ ನಿರ್ಮಾಣ ಮಾಡಬೇಕು. ಇಲ್ಲಿ ಘಟಕ ನಿರ್ಮಾಣಕ್ಕೆ ಮುಂದಾದರೆ ಗ್ರಾಮಸ್ಥರು ಉಗ್ರ ಪತಿಭಟನೆ ನಡೆಸಲಾಗುವುದು ಎಂದು ಪಂಚಾಯತ್ ಗೆ ಗ್ರಾಮಸ್ಥರು ಎಚ್ಚರಿಸಿದ್ದಾರೆ.