Connect with us

BELTHANGADI

ಮಹಾಮಾರಿ ಕೊರೊನಾಗೆ ಒಂದೇ ಕುಟುಂಬದ ಮೂವರ ಬಲಿ…!!

ಮಂಗಳೂರು ಮೇ 28: ಕೊರೊನಾ ಮಹಾಮಾರಿಯ ಆರ್ಭಟ ಮುಂದುವರೆದಿದ್ದು, ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಮಾತ್ರ ಏರಿಕೆಯಲ್ಲೇ ಇದ್ದು, ಎಷ್ಟೋ ಕುಟುಂಬಗಳನ್ನು ಕೊರೊನಾ ಸರ್ವನಾಶ ಮಾಡಿದೆ. ಇದೀಗ ಕರೊನಾಗೆ ಒಂದೇ ಕುಟುಂಬದ ಮೂವರ ಪ್ರಾಣಹೋಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಾಂಧಿನಗರದಲ್ಲಿ ಸಂಭವಿಸಿದೆ.


ತಂದೆ ಮಗಳು ಮತ್ತು ಅಳಿಯನನ್ನು ಕೊರೊನಾ ಬಲಿ ಪಡೆದಿದ್ದು, ಇಡೀ ಕುಟುಂಬವನ್ನು ಶೋಕಸಾಗದಲ್ಲಿ ಮುಳುಗಿಸಿದೆ. ಪುರಲ್ಲ (92), ಇವರ ಮಗಳು ಅಪ್ಪಿ (45) ಮತ್ತು ಅಪ್ಪಿಯ ಗಂಡ ಗುರುವ (52) ಮೃತ ದುರ್ದೈವಿಗಳು.

ಪುರಲ್ಲ ಅವರಿಗೆ ಮೊದಲು ಕೊರೊನಾ ಸೊಂಕು ತಗುಲಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 13ರಂದು ಕೊನೆಯುಸಿರೆಳೆದರು. ಇದಾದ 10 ದಿನಕ್ಕೆ ಅಂದರೆ ಮೇ 32ರಂದು ಇವರ ಮಗಳು ಮಗಳು ಅಪ್ಪಿ ಕೂಡ ಕರೊನಾಗೆ ಬಲಿಯಾದರು. ಪತ್ನಿ ಸತ್ತ 5 ದಿನಕ್ಕೆ ಗಂಡ ಗುರುವ ಕೂಡ ಮೃತಪಟ್ಟಿದ್ದಾರೆ.