LATEST NEWS
ಅಂಗಡಿಗೆ ನುಗ್ಗಿದ ತ್ಯಾಜ್ಯ ವಿಲೇವಾರಿ ಲಾರಿ…ಗಾಡಿ…ಅಂಗಡಿ ಜಖಂ

ಮಂಗಳೂರು ಎಪ್ರಿಲ್ 22: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ಟ್ರಕ್ ಚಾಲಕನ ನಿರ್ಲಕ್ಷ್ಯದಿಂದಾಗಿ ಅಂಗಡಿಗೆ ನುಗ್ಗಿ, ಹಲವು ವಾಹನಗಳು ಜಖಂಗೊಂಡಿರುವ ಘಟನೆ ನಗರದ ಕಂಕನಾಡಿ ಮಾರ್ಕೆಟ್ ನಲ್ಲಿ ನಡೆದಿದೆ.
ಆ್ಯಂಟನಿ ಕಂಪನಿಗೆ ಸೇರಿದ ತ್ಯಾಜ್ಯ ವಿಲೇವಾರಿ ವಾಹನ ಇದಾಗಿದ್ದು,ಲಾರಿಯನ್ನು ಚಾಲು ಮಾಡಿ ನಿಲ್ಲಿಸಿ ಹೋಗಿದ್ದಾನೆ.ಈ ವೇಳೆ ಲಾರಿಯು ಏಕಾಏಕಿ ಚಲಿಸಿ ಮೂರು ಕಾರು, ಎರಡು ದ್ವಿಚಕ್ರ ವಾಹನ, ಒಂದು ಟೆಂಪೋಗೆ ಢಿಕ್ಕಿ ಹೊಡೆದಿದೆ. ಅಲ್ಲದೆ ಸಮೀಪದ ಕೋಳಿ ಅಂಗಡಿಗೂ ಢಿಕ್ಕಿ ಹೊಡೆದಿದೆ. ಇದರಿಂದ ಒಂದು ದ್ವಿಚಕ್ರ ವಾಹನ ಅಪ್ಪಚ್ಚಿಯಾದರೆ ಕೋಳಿ ಅಂಗಡಿಗೆ ಹಾನಿಯಾಗಿದೆ.

ಘಟನೆ ನಡೆಯುವಾಗ ಅಲ್ಲೇ ಇದ್ದ ಚಾಲಕ ಬಳಿಕ ಪರಾರಿಯಾಗಿದ್ದಾನೆ . ಈ ಮಧ್ಯೆ ಲಾರಿ ಚಾಲಕ ಸ್ಥಳಕ್ಕೆ ಆಗಮಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ