Connect with us

    LATEST NEWS

    ಭಾರೀ ಮಳೆಗೆ ದೂಧ್‌ಸಾಗರ್ ಜಲಪಾತದ ಸೇತುವೆ ಕುಸಿತ: 40 ಪ್ರವಾಸಿಗರ ರಕ್ಷಣೆ

    ಗೋವಾ, ಅಕ್ಟೋಬರ್ 15: ಗೋವಾದ ದೂಧ್‌ಸಾಗರ್ ಜಲಪಾತದಲ್ಲಿ ಶುಕ್ರವಾರ ಭಾರೀ ಮಳೆಯಿಂದಾಗಿ ಕೇಬಲ್ ಸೇತುವೆ ಕುಸಿದಿದ್ದು, ನೀರಿನಲ್ಲಿ ಸಿಲುಕಿದ್ದ 40ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಲಾಗಿದೆ. ಶುಕ್ರವಾರ ಸಂಜೆ ಗೋವಾ-ಕರ್ನಾಟಕ ಗಡಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ದೂಧ್​ಸಾಗರ್ ಜಲಪಾತದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಈ ಘಟನೆ ನಡೆದಿದೆ. ಗೋವಾ ರಾಜ್ಯದ ಹಲವು ಭಾಗಗಳಲ್ಲಿ ದಿನವಿಡೀ ಭಾರೀ ಮಳೆಯಾಗಿದೆ.

    ಕೇಬಲ್ ಸೇತುವೆ ಕುಸಿದಿದ್ದರಿಂದ ಪ್ರವಾಹದ ನೀರಿನ ಮತ್ತೊಂದು ತೀರದಲ್ಲಿದ್ದ 40 ಪ್ರವಾಸಿಗರು ಸಿಲುಕಿಕೊಂಡಿದ್ದರು. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. “ಶುಕ್ರವಾರ ಸಂಜೆ ಗೋವಾ-ಕರ್ನಾಟಕ ಗಡಿಯಲ್ಲಿ ಭಾರೀ ಮಳೆಯಿಂದಾಗಿ ದೂಧಸಾಗರ್ ಜಲಪಾತದಲ್ಲಿ ನೀರಿನ ಮಟ್ಟವು ಗಣನೀಯವಾಗಿ ಹೆಚ್ಚಾಗಿದೆ. ಈ ನೀರಿನ ಮಟ್ಟವು ದಾಟಲು ಬಳಸಿದ ಸೇತುವೆಯ ಕುಸಿತಕ್ಕೆ ಕಾರಣವಾಯಿತು. ಇದರಿಂದ 40ಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ಸಿಲುಕಿಕೊಂಡರು. ದೃಷ್ಟಿ ಲೈಫ್ ಸೇವರ್ಸ್​ ಅಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳಿಗೆ ತ್ವರಿತವಾಗಿ ಸಹಾಯ ಮಾಡಿ, ಅವರಿಗೆ ಸುರಕ್ಷಿತ ನೆಲೆಗಳನ್ನು ಒದಗಿಸಿದರು.

    ಭಾರೀ ಮಳೆ ಮತ್ತು ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ ಮುಂದಿನ ಕೆಲವು ದಿನಗಳವರೆಗೆ ದೂಧಸಾಗರ್ ಜಲಪಾತಕ್ಕೆ ಇಳಿಯದಂತೆ ದೃಷ್ಟಿ ಮರೈನ್ ಜನರಿಗೆ ಎಚ್ಚರಿಕೆ ನೀಡಿದೆ. ಪ್ರವಾಹದ ನೀರಿನಲ್ಲಿ ಸಿಲುಕಿದವರನ್ನು ರಕ್ಷಿಸಿದವರನ್ನು ಗೋವಾ ಸಿಎಂ ಪ್ರಮೋದ್ ಸಾವಂತ್ ಅಭಿನಂದಿಸಿದ್ದಾರೆ. ಪ್ರವಾಸಿಗರನ್ನು ರಕ್ಷಿಸಿದ ಜೀವರಕ್ಷಕ ಸಂಸ್ಥೆಯನ್ನು ಸಿಎಂ ಸಾವಂತ್ ಅಭಿನಂದಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *