Connect with us

    National

    ವಿಧಿಯಾಟ…ದುಬೈನಲ್ಲಿ ಪತಿ ಸಾವು….ಇತ್ತ ಕೇರಳದಲ್ಲಿ ಮಗುವಿಗೆ ಜನ್ಮ ನೀಡಿದ ಪತ್ನಿ

    ಸುದ್ದಿ ತಿಳಿಯದ ಕೇರಳದಲ್ಲಿದ್ದ ಆಥಿರಾಗೆ ಹೆಣ್ಣು ಮಗು ಹೆರಿಗೆಯಾಗಿದೆ.

    ಕೇರಳ ಜೂನ್ 9: ಕೊರೊನಾ ಗೆ ಇಡೀ ವಿಶ್ವವೇ ತಲ್ಲಣಿಸಿದೆ. 2020 ವರ್ಷ ಒಬ್ಬೊಬ್ಬರ ಜೀವನದಲ್ಲಿ ಆಡಿಸಿರುವ ಆಟ ಮಾತ್ರ ಶತಮಾನಗಳ ವರೆಗೂ ನೆನಪಿನಲ್ಲಿರುವಂತೆ ಮಾಡಿದೆ. ಎರಡು ದಿನಗಳ ಹಿಂದೆ ಅಷ್ಟೇ ಖ್ಯಾತ ಚಿತ್ರ ನಟ ಚಿರಂಜೀವಿ ಸರ್ಜಾ ಅವರ ಸಾವು, ಅವರ ಪತ್ನಿ 5 ತಿಂಗಳ ಗರ್ಭಿಣಿ ಮೇಘನಾ ರಾಜ್ ಅವರ ದುಖದ ಕ್ಷಣಗಳನ್ನು ಜನ ಮರೆಯುವ ಮುನ್ನವೇ ಕೇರಳದಲ್ಲಿ ಮತ್ತೊಂದು ಇಂತಹುದೇ ಘಟನೆ ನಡೆದಿದ್ದು, ಇದೆಂತಹ ದುರ್ವಿಧಿ ಎಂದು ನಮ್ಮನ್ನೇ ನಾವೇ ಕೇಳುವಂತಾಗಿದೆ.

    ತುಂಬು ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ಕಳುಹಿಸಿದ ಒಂದೇ ತಿಂಗಳಿನಲ್ಲಿ ಮಗುವಿನ ಮುಖ ನೋಡುವುದಕ್ಕೂ ಮುನ್ನವೇ ಮಲಗಿದ್ದ ಸ್ಥಳದಲ್ಲಿಯೇ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದುಬೈನಲ್ಲಿ ನಡೆದಿದೆ.

    ನಿತೀನ್ ಚಂದ್ರ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿತೀನ್ ಅವರಿಗೆ ಇನ್ನೂ 28 ವರ್ಷ ವಯಸ್ಸು, ಲಾಕ್’ಡೌನ್ ಸಂದರ್ಭದಲ್ಲಿ ದುಬೈನಲ್ಲಿ ಸಿಲುಕೊಂಡಿದ್ದ ತಮ್ಮ ಗರ್ಭಿಣಿ ಪತ್ನಿ ಅಥಿರಾ ಗೀತಾ ಶ್ರೀಧರನ್ ಅವರನ್ನು ಭಾರತಕ್ಕೆ ಕಳುಹಿಸುವ ಸಲುವಾಗಿ ನಿತೀನ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

    ಏಪ್ರಿಲ್ ತಿಂಗಳಿನಲ್ಲಿ ದಂಪತಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಶೇಷ ವಿಮಾನ ಮೂಲಕ ಕೇರಳ ರಾಜ್ಯಕ್ಕೆ ಹೋಗಲು ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದರು.
    ಬಳಿಕ ಭಾರತ ಸರ್ಕಾರ ಜಾರಿಗೆ ತಂದಿದ್ದ ವಂದೇ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಗರ್ಭಿಣಿ ಗೀತಾ ಅವರನ್ನು ಕೇರಳಕ್ಕೆ ವಾಪಸ್ ಬಂದಿದ್ದರು. ಆದರೆ, ಕೆಲಸದ ನಿಮಿತ್ತ ನಿತಿನ್ ಅವರು ಪತ್ನಿ ಜೊತೆಗೆ ಭಾರತಕ್ಕೆ ಬಂದಿರಲಿಲ್ಲ. ಜೂನ್ 2ನೇ ತಾರೀಖು 28 ವರ್ಷ ಪೂರೈಸಿದ್ದ ನಿತಿನ್ ಅವರು ಜುಲೈ ತಿಂಗಳಿನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ, ತಮ್ಮ ಮಗುವಿನ ಮುಖವನ್ನು ನೋಡುವುದಕ್ಕೂ ಮುಂಚೆಯೇ ನಿತಿನ್ ಇಹಲೋಕ ತ್ಯಜಿಸಿದ್ದಾರೆ.

    ದುಬೈನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನಿತಿನ್ ಅಲ್ಲಿನ ರಕ್ತದಾನ ಸಂಘದ ಸದಸ್ಯರು ಆಗಿದ್ದರು. ಪತ್ನಿ ಅದೀರಾಳ ಜೊತೆಯಲ್ಲಿ ವಾಪಸ್ ಬರಬೇಕಿದ್ದ ನಿತಿನ್ ದುಬೈನಲ್ಲಿ ಸಿಲುಕಿದ್ದ ಭಾರತದ ಬಡವರನ್ನು ಇವರ ಜಾಗದಲ್ಲಿ ಇಂಡಿಯಾಗೆ ಕಳುಹಿಸಿಕೊಟ್ಟಿದ್ದರು. ಅವರ ಪ್ರಯಾಣದ ವೆಚ್ಚವನ್ನು ಕೂಡ ಅವರೇ ಭರಿಸಿದ್ದರು. ನಂತರ ನನಗೆ ಚಾನ್ಸ್ ಸಿಗುತ್ತೆ ಆಗ ನಾನು ಭಾರತಕ್ಕೆ ಬರುತ್ತೇನೆ ಎಂದು ಹೇಳಿದ್ದರು.


    ಆದರೆ ವಿಧಿಯಾಟವೇ ಬೇರೆಯಾಗಿತ್ತು. ದುಬೈನಲ್ಲಿ ಏಕಾಂಗಿಯಾದ್ದ ನಿತಿನ್ ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಮುಂಚೆಯಿಂದಲು ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ನಿತಿನ್ ಇದಕ್ಕಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಸೋಮವಾರ ಮಲಗಿದ್ದವರು ಏಳಲೇ ಇಲ್ಲ. ಅವರು ನಿದ್ರೆಯಲ್ಲಿ ಇರುವಾಗಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *