Connect with us

    DAKSHINA KANNADA

    ದುಬೈ : ಡಾ.ತುಂಬೆ ಮೊಯ್ದಿನ್ ನೇತೃತ್ವದ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಿಂದ 700 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

    ದುಬೈ :   ಡಾ. ತುಂಬೆ ಮೊಯ್ದಿನ್ (Dr. thumbay moideen) ರವರ ನೇತೃತ್ವದ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ( gulf medical university)  ಪದವಿ ಪ್ರದಾನ ಕಾರ್ಯಕ್ರಮ ಇತ್ತೀಚಿಗೆ ದುಬಾಯಿಯ ಅಲ್ ಜುರ್ಫ್ ಕ್ಯಾಂಪಸ್ಸ್ ನಲ್ಲಿ ಜರಗಿತು .

    ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಉತ್ತೀರ್ಣ ರಾದ 700 ಮಂದಿ ವಿದ್ಯಾರ್ಥಿಗಳು ವೈಟ್ ಕೋಟ್ ಸಮಾರಂಭದಲ್ಲಿ ಅತಿಥಿಗಳಿಂದ ಪದವಿ ಸರ್ಟಿಫಿಕೇಟ್ ಪಡೆದು ಕೊಂಡರು .

     


    ನೂರಾ ಎರಡು ವಿವಿಧ ದೇಶಗಳ 5000 ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದು ಬೇರೆ ಬೇರೆ ವಿಭಾಗಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಅತ್ಯಂತ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ತುಂಬೆ ಸಮೂಹ ಸಂಸ್ಥೆಯ ಸ್ಥಾಪಕರಾದ ಡಾ .ತುಂಬೆ ಮೊಯಿದೀನ್ ಈ ಸಂಧರ್ಭದಲ್ಲಿ ತಿಳಿಸಿದರು.

    ಸಮಾರಂಭದಲ್ಲಿ ಸಂಸ್ಥೆಯ ಉಪಕುಲಪತಿ ಹೊಸಾಮ್ ಹಾಮ್ ಡಿ ,ಪದವಿ ಪಡೆದ ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

    Share Information
    Advertisement
    Click to comment

    Leave a Reply

    Your email address will not be published. Required fields are marked *