LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ದುಬೈನಿಂದ ಬಂದ 15 ಮಂದಿಗೆ ಕೊರೊನಾ ದೃಢ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ದುಬೈನಿಂದ ಬಂದ 15 ಮಂದಿಗೆ ಕೊರೊನಾ ದೃಢ
ಮಂಗಳೂರು ಮೇ .15: ದುಬೈನಿಂದ ಮಂಗಳೂರಿಗೆ ಆಗಮಿಸಿದ 15 ಮಂದಿಯಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ. ಇಂದರೊಂದಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ 16 ಕೊರೊನಾ ಪ್ರಕರಣ ದಾಖಲಾಗಿದೆ. ಫಸ್ಟ್ ನ್ಯೂರೋ ಹೊಡೆತಕ್ಕೆ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗ ಮತ್ತೆ ಕೊರೊನಾ ಸಂಖ್ಯೆ ಒಂದೇ ದಿನದಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾಗಿದೆ.
ದುಬೈನಿಂದ ಮಂಗಳವಾರ ಆಗಮಿಸಿದ 15 ಮಂದಿಯಲ್ಲಿ ಕೋವಿಡ್-19 ಸೋಂಕು ದೃಡಪಟ್ಟಿದೆ ಅದರಲ್ಲಿ 12 ಪುರುಷರು ಮತ್ತು 4 ಮಹಿಳೆಯರಿಗೆ ಸೋಂಕು ದೃಢವಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೋವಿಡ್-19 ಕಾರಣಕ್ಕಾಗಿ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನುಮರಳಿ ಭಾರತಕ್ಕೆ ತರುವ ವಂದೇ ಭಾರತ್ ಮಿಶನ್ ಕಾರ್ಯಾಚರಣೆಯಡಿ 176 ಮಂದಿ ಮಂಗಳವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. 123 ಜನರ ಪೈಕಿ 15 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ದುಬೈನಿಂದ ಏರ್ ಲಿಫ್ಟ್ ಅಗಿದ್ದ 179 ಪ್ರಯಾಣಿಕರ ಪೈಕಿ 123 ಜನ ಮಂಗಳೂರಿನವರಾಗಿದ್ದಾರೆ. ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 16 ಸೊಂಕು ದೃಢಪಟ್ಟಿದ್ದು, 15 ದುಬೈ ರಿಟರ್ನ್ಸ್ ಮತ್ತು 1 ಬೇರೆ ಸಂಪರ್ಕದಿಂದ ಕೊರೊನಾ ಸೊಂಕು ದೃಢಪಟ್ಟಿದೆ. ಸದ್ಯ ದಕ್ಷಿಣಕನ್ನಡ ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ದ.ಕ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪಾಸಿಟಿವ್ ಕೇಸ್ ಗಳ ಸಂಖ್ಯೆ 50ಕ್ಕೆ ಏರಿಕೆ, ದ.ಕ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರು 5 ಮಂದಿ