ಅಕ್ರಮ ಕಸಾಯಿ ಖಾನೆಗೆ ದಾಳಿ ಮೂವರ ಬಂಧನ

ಸುಳ್ಯ ಮೇ.15: ಬೆಳ್ಳಾರೆ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ಸಮೀಪ ಉಮಿಕ್ಕಳ ಎಂಬಲ್ಲಿ ಅಕ್ರಮ ಕಸಾಯಿ ಅಡ್ಡೆಗೆ ಬೆಳ್ಳಾರೆ ಪೊಲೀಸರು ಶುಕ್ರವಾರ ದಾಳಿ ಮಾಡಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಹಾರಿಸ್,ಮಹಮ್ಮದ್ ಸಿನಾನ್,ಉಮ್ಮರ್ ಫಾರೂಕ್ ಎಂದು ಗುರುತಿಸಲಾಗಿದೆ, ಬಂಧಿತರು ಮಾಸ್ತಿಕಟ್ಟೆಯ ಮರದ ಅಡಿಯಲ್ಲಿ ದನದ ಮಾಂಸ ಮಾಡುವ ಖಚಿತ ಮಾಹಿತಿ ದೊರೆತ ಪೊಲೀಸರು ದಾಳಿ ಮಾಡಿದ ಪೋಲೀಸರು ಸುಮಾರು 40 ಕೆ.ಜಿ.ದನದ ಮಾಂಸ ಹಾಗೂ ಮಾಂಸ ಮಾಡಲು ಉಪಯೋಗಿಸಿದ ಕತ್ತಿ,ಚೂರಿ ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನಿಬ್ಬರು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.