LATEST NEWS
ಪೋಲೀಸ್ ಮತ್ತು : ಲೈಟ್ ಕಂಬಕ್ಕೆ ಕುತ್ತು
ಪುತ್ತೂರು, ಸೆಪ್ಟಂಬರ್ 10: ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಉದ್ದುದ್ದ ನಾಲಿಗೆ ಬಿಡುವ ಪೋಲೀಸರೇ ಕಾನೂನು ಉಲ್ಲಂಘಿಸಿ ಸಿಕ್ಕಿ ಬಿದ್ದಿರುವ ಸಾಕಷ್ಟು ಘಟನೆಗಳು ನಮ್ಮ ಕಣ್ಣಮುಂದಿದೆ. ಇಂಥಹುದೇ ಒಂದು ಪ್ರಕರಣ ಸೆಪ್ಟೆಂಬರ್ 9 ರ ಶನಿವಾರ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.ಸೆಪ್ಟೆಂಬರ್ 7 ರಂದು ಪುತ್ತೂರಿನಲ್ಲಿ ದಾಖಲೆಯ ಸಂಚಾರಿ ನಿಯಮ ಉಲ್ಲಂಘನೆಯ ಮೇರೆಗೆ ಸುಮಾರು 1.69 ಲಕ್ಷ ರೂಪಾಯಿ ದಂಡ ಸಂಗ್ರಹಿಸಿರುವುದಾಗಿ ಜಂಭ ಕೊಚ್ಚಿಕೊಂಡಿದ್ದ ಇದೇ ಪೋಲೀಸರು ಇದೀಗ ತಮ್ಮ ವಾಹನವನ್ನು ಮದ್ಯ ಸೇವಿಸಿ ಚಲಾಯಿಸಿ ಸಾರ್ವಜನಿಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.ಶನಿವಾರ ರಾತ್ರಿ ಕಿಕ್ ಏರಿಸಿಕೊಂಡು ಟ್ರಾಫಿಕ್ ಸ್ಟೇಷನ್ ಗೆ ಸೇರಿದ ಇಂಟರ್ ಸೆಪ್ಟರ್ ಚಲಾಯಿಸಿದ ಪೋಲೀಸ್ ವಾಹನವನ್ನು ಸೀದಾ ಲೈಟ್ ಕಂಬಕ್ಕೆ ಹತ್ತಿಸಲು ಯತ್ನಿಸಿದ್ದಾನೆ.
ಕೈ ಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದ ಪೋಲೀಸ್ ಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಟಯರ್ ನಲ್ಲಿ ಗಾಳಿ ಕಡಿಮೆಯಿದ್ದರೆ, ಸೈಡ್ ಮಿರರ್ ಇಲ್ಲದಿದ್ದರೆ, ಪೋಲೀಸರಲ್ಲಿ ಕಾನೂನಿನ ಕುರಿತು ವಾದ ಮಾಡಿದರೆ ಕೇಸಿನ ಜೊತೆಗೆ ಜೈಲಿಗೂ ಕಳಿಸುವ ಪುತ್ತೂರು ಪೋಲೀಸರು ತಾವು ಎಷ್ಟು ಸರಿ ಇದ್ದಾರೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ.ಸೆಪ್ಟೆಂಬರ್ 7 ರಂದು ದುರ್ವರ್ತನೆ ತೋರಿದ ಎನ್ನುವ ಕಾರಣಕ್ಕೆ ಆತನನ್ನು ಕಂಬಿ ಎಣಿಸುವಂತೆ ಮಾಡಿದ ಪುತ್ತೂರು ಪೋಲೀಸರಿಗೆ ಯಾವ ಶಿಕ್ಷೆ ನೀಡಬೇಕು ಎನ್ನುವುದನ್ನು ಜನ ನಿರ್ಧರಿಸಬೇಕಿದೆ.
ತಾವು ಮಾಡಿದರೆ ಪ್ರಕರಣವನ್ನು ಮುಚ್ಚಿಡಲು ಯತ್ನಿಸುವ ಪೋಲೀಸರು ಅಸಹಾಯಕ ಮಾಡಿದ ಸಣ್ಣ ಪುಟ್ಟ ತಪ್ಪಿಗೂ ದಮ್ಕಿ ಹಾಕುವ ಪುತ್ತೂರು ಪೋಲೀಸರು ತಾವು ಎಷ್ಟು ಸರಿಯಿದ್ದಾರೆ ಎನ್ನುವುದನ್ನು ಮೊದಲು ನೋಡಬೇಕಿದೆ.