LATEST NEWS
ರಾತ್ರಿ ಮದ್ಯದ ನಶೆಯಲ್ಲಿ ಯುವತಿಯ ರಂಪಾಟ

ರಾತ್ರಿ ಮದ್ಯದ ನಶೆಯಲ್ಲಿ ಯುವತಿಯ ರಂಪಾಟ
ಮಂಗಳೂರು ಸೆಪ್ಟೆಂಬರ್ 2: ಮಂಗಳೂರಿನಲ್ಲಿ ರಾತ್ರಿ ಸಿಕ್ಕಾಪಟ್ಟೆ ಕುಡಿದು ಮತ್ತೇರಿಸಿಕೊಂಡ ಯುವತಿಯೊಬ್ಬಳು ನಶೆಯಲ್ಲಿ ಬೀದಿ ರಂಪಾಟ ನಡೆಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಸುಮಾರು 10: 22ರ ವೇಳೆ ಈ ಘಟನೆ ನಡೆದಿದ್ದು, ಯುವತಿಯೊಬ್ಬಳು ನಶೆ ಏರಿಸಿಕೊಂಡು ನಿಯಂತ್ರಣವೇ ಇಲ್ಲದೆ ತೂರಾಡುತ್ತಾ ಆ್ಯಕ್ಟಿವಾ ಚಲಾಯಿಸಿದ್ದಾಳೆ. ಎರಡು ಮೂರು ಬಸ್‌ಗಳನ್ನು ಓವರ್ ಟೇಕ್ ಮಾಡಿ ಯರ್ರಾಬಿರ್ರಿ ದ್ವಿಚಕ್ರ ವಾಹನ ಚಲಾಯಿಸಿದ್ದ ಯುವತಿಯನ್ನು ರಿಕ್ಷಾ ಚಾಲಕನೋರ್ವ ಮಂಗಳೂರಿನ ನವಭಾರತ್ ಸರ್ಕಲ್ ಬಳಿ ಅಡ್ಡಗಟ್ಟಿದ್ದಾನೆ.

ಈ ವೇಳೆ ನಡು ರಸ್ತೆ ರಸ್ತೆಯಲ್ಲೇ ಯುವತಿ ಹಾಗೂ ರಿಕ್ಷಾ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿನ ನಡುವೆ ಕಂತೆ ಕಂತೆ ಹಣ ತೆಗೆದು ನಿನಗೆಷ್ಟು ಬೇಕು ಎಂದು ಅಬ್ಬರಿಸಿದ್ದಾಳೆ ಎನ್ನಲಾಗಿದೆ. ಯುವತಿಯ ರಂಪಾಟ ಕಂಡು ಸ್ಥಳದಲ್ಲಿ ಜಮಾಯಿಸಿದ್ದ ಜನರು ಆಕೆಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ನಡೆಯುತ್ತಿದಂತೆ ಮಂಗಳೂರು ಡಿಸಿಪಿ ಅವರಿಗೆ ಮಾಹಿತಿ ನೀಡಲಾಗಿದ್ದರೂ, ಸುಮಾರು ಅರ್ಧ ಗಂಟೆವರೆಗೂ ಪೊಲೀಸರು ಸ್ಥಳಕ್ಕೆ ಬಂದೇ ಇಲ್ಲ ಎಂದು ಆರೋಪಿಸಲಾಗಿದೆ.