Connect with us

    LATEST NEWS

    ನಿಯಮ ಬಾಹಿರವಾಗಿ ನಿಷೇಧಿತ ಔಷಧ ಮಾರಾಟ – ಪ್ರಕರಣ ದಾಖಲು

    ನಿಯಮ ಬಾಹಿರವಾಗಿ ನಿಷೇಧಿತ ಔಷಧ ಮಾರಾಟ – ಪ್ರಕರಣ ದಾಖಲು

    ಮಂಗಳೂರು ಜುಲೈ 18: ನಿಯಮ ಬಾಹಿರವಾಗಿ ನಿಷೇಧಿತ ಔಷಧಗಳನ್ನು ಮಾರಾಟ ಮಾಡುತ್ತಿದ್ದ ಔಷಧ ಮಳಿಗೆಯ ಮೇಲೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಔಷಧ ನಿಯಂತ್ರಣ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ನಗರದ ಪಿವಿಎಸ್ ವೃತ್ತದ ಬಳಿಯ ಹೆಲ್ತ್ ಕ್ಯೂರ್ ಮೆಡಿಕಲ್ ಶಾಪ್ ಗೆ ದಾಳಿ ನಡೆಸಿದ ಪೊಲೀಸರು ಹಾಗೂ ಔಷಧ ನಿಯಂತ್ರಣ ಅಧಿಕಾರಿಗಳು ಈ ಸಂದರ್ಭದಲ್ಲಿ ವೈದ್ಯರ ಸಲಹಾ ಚೀಟಿ‌ ಇಲ್ಲದೇ Stasmo Proxyvon- plus ಟ್ಯಾಬ್ಲೆಟನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.

    ಈ ಹಿನ್ನಲೆಯಲ್ಲಿ ಮಳಿಗೆಯಲ್ಲಿದ್ದ ಅಪಾರ ಪ್ರಮಾಣದ ಟ್ಯಾಬ್ಲೆಟ್ ಗಳನ್ನು ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ಈ ಕುರಿತು ಡ್ರಗ್ ಕಂಟ್ರೋಲ್ ಇಲಾಖೆಯಿಂದ ನಗರದ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲುಮಾಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply