Connect with us

    FILM

    ಬಿಗ್ ಬಾಸ್ ಮನೆಗೆ ಬಂದ ಡ್ರೋನ್ ಪ್ರತಾಪ್ ತಂದೆ ತಾಯಿ….ಕಣ್ಣೀರು ಹಾಕಿ ಗಳಗಳನೆ ಅತ್ತ ಡ್ರೋನ್ ಪ್ರತಾಪ್

    ಬೆಂಗಳೂರು ಡಿಸೆಂಬರ್ 28: ತನ್ನ ಬಣ್ಣ ಬಣ್ಣದ ಮಾತುಗಳಿಂದ ಇಡೀ ರಾಜ್ಯಕ್ಕೆ ತಾನೊಬ್ಬ ಯುವ ವಿಜ್ಞಾನಿ ಎಂದು ಹೇಳಿಕೊಂಡಿದ್ದ ಡ್ರೋನ್ ಪ್ರತಾಪ್ ಇದೀಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿದ್ದಾರೆ. ಈ ನಡುವೆ ತನ್ನ ವಿವಾದದ ಬಳಿಕ ಡ್ರೋನ್ ಪ್ರತಾಪ್ ಅವರು ಹಲವು ವರ್ಷಗಳಿಂದ ತಂದೆ-ತಾಯಿ ಜೊತೆ ಮಾತನಾಡಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ. ಅಪ್ಪ ಹಾಗೂ ಅಮ್ಮನ ಜೊತೆ ಮಾತನಾಡಲೇಬೇಕು ಎಂದುಕೊಂಡಿದ್ದರು. ಆ ಆಸೆ ಈಗ ನೆರವೇರಿದೆ.


    ಬಿಗ್ ಬಾಸ್​ನಲ್ಲಿ ಈ ವಾರ ಫ್ಯಾಮಿಲಿ ವೀಕ್ ಇತ್ತು. ಈ ವೇಳೆ ಕುಟುಂಬದವರು ಬಂದಿದ್ದಾರೆ. ಪ್ರತಾಪ್ ಅವರ ಅಪ್ಪ ಹಾಗೂ ಅಮ್ಮ ಬಂದಿದ್ದಾರೆ. ಈ ವೇಳೆ ಡೋರ್ ಲಾಕ್ ಆಗಿತ್ತು. ಪ್ರತಾಪ್ ಅವರು ಕಣ್ಣೀರು ಹಾಕಿ ಗಳಗಳನೆ ಅತ್ತಿದ್ದಾರೆ. ‘ಬಿಗ್ ಬಾಸ್ ಬಾಗಿಲು ತೆಗೆಯಿರಿ’ ಎಂದು ಅತ್ತಿದ್ದಾರೆ. ತಂದೆ-ಮಗನ ಸಮಾಗಮ ನೋಡಲು ವೀಕ್ಷಕರು ಕಾದಿದ್ದಾರೆ.

    ತನ್ನ ತಾಯಿ ಹಾಗೂ ತಂದೆಯ ಧ್ವನಿ ಕೇಳಿದ್ದೇ ತಡ ಪ್ರತಾಪ್ ಅವರು ಓಡೋಡಿ ಅವ್ವಾ-ಅಪ್ಪಾ ಎನ್ನುತ್ತಾ ಬಾಗಿಲಿನ ಕಡೆಗೆ ಓಡಿದಿದ್ದಾರೆ. ಈ ಒಂದು ಪ್ರೋಮೋವನ್ನು ಬಿಗ್​ಬಾಸ್ ರಿಲೀಸ್ ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply