Connect with us

    LATEST NEWS

    ಪ್ರಧಾನಿ ನರೇಂದ್ರಮೋದಿ ಅವರ ಮನೆ ಮೇಲೆ ಶಂಕಾಸ್ಪದವಾಗಿ ಡ್ರೋಣ್ ಹಾರಾಟ….!!

    ನವದೆಹಲಿ ಜುಲೈ 03 :ನವದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮನೆ ಮೇಲೆ ಅಕ್ರಮವಾಗಿ ಡ್ರೋಣ್ ಹಾರಾಟ ನಡೆಸಲಾಗಿದ್ದು, ಇದೀಗ ದೆಹಲಿ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.


    ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿಗಳ ನಿವಾಸದ ಮೇಲೆ ಡ್ರೋಣ್ ಹಾರಾಟ ನಡೆಸಿರುವುದನ್ನು ಮೋದಿ ಭದ್ರತೆಗಾಗಿ ನಿಯೋಜನೆಗೊಂಡಿರುವ ವಿಶೇಷ ರಕ್ಷಣಾ ದಳದ ಅಧಿಕಾರಿಗಳು ಗಮನಿಸಿದ್ದಾರೆ.


    ಕೂಡಲೇ ದೆಹಲಿ ಪೊಲೀಸರು ಶೋಧಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಇದೂವರೆಗೆ ಯಾವುದೇ ಡ್ರೋಣ್ ಪತ್ತೆಯಾಗಿಲ್ಲ ಎಂದು ತಿಳಿದಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸವು ನೋ ಫ್ಲೈ ಝೋನ್ ಅಥವಾ ಡ್ರೋಣ್ ಝೋನ್ ಅಡಿಯಲ್ಲಿ ಬರುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply