LATEST NEWS
ಉಡುಪಿ – ಬೆಳಿಗ್ಗೆ 90 ಸಂಜೆ 90 ಎಣ್ಣೆ ಉಚಿತವಾಗಿ ನೀಡಿ….!!
ಉಡುಪಿ ಜುಲೈ 11: ರಾಜ್ಯ ಸರಕಾರ ಮಹಿಳೆಯರಿಗೆ ಉಚಿತ ಘೋಷಣೆ ಜಾರಿಗೊಳಿಸಿ, ಮದ್ಯದ ಬೆಲೆ ಏರಿಕೆ ಮಾಡಿದ ಹಿನ್ನಲೆ ಇದೀಗ ಮದ್ಯಪ್ರಿಯರು ತಮಗೂ ಉಚಿತವಾಗಿ ಮದ್ಯ ನೀಡುವಂತೆ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಉಡುಪಿ ನಾಗರಿಕ ಸಮಿತಿ ಸಹಕಾರದಲ್ಲಿ ಮದ್ಯಪ್ರಿಯರು ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದು ಗಮನ ಸೆಳೆದರು.
ನಾಗರಿಕ ಸಮಿತಿ ನಿತ್ಯಾನಂದ ಒಳಕಾಡು, ಗೋವಿಂದ ಶೆಟ್ಟಿ ಮಾತನಾಡಿ, ಸರಕಾರ ಉಚಿತ ಯೋಜನೆ ಮಾದರಿಯಲ್ಲಿ ಮದ್ಯಪ್ರಿಯರಿಗೂ ಬೆಳಗ್ಗೆ 90 ಎಂಎಲ್, ಸಂಜೆ 90 ಎಂಎಲ್ ಮದ್ಯ ಉಚಿತವಾಗಿ ನೀಡುವಂತೆ ಒತ್ತಾಯಿಸಿದರು. ಸರಕಾರಕ್ಕೆ ಹೆಚ್ಚು ಆರ್ಥಿಕ ಬಲ ನೀಡುವುದು ಮದ್ಯಪ್ರಿಯರ ಸುಂಕ. ಹೀಗಿರುವಾಗ ಮದ್ಯಕ್ಕೂ ಉಚಿತ ಯೋಜನೆ ಜಾರಿಯಾಗಬೇಕು ಎಂದರು.
You must be logged in to post a comment Login