LATEST NEWS
ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿಗೆ ತರಲು ವಿಶ್ವಹಿಂದೂ ಪರಿಷತ್ ಮನವಿ
ಮಂಗಳೂರು ಜುಲೈ 25: ಶೃಂಗೇರಿ ಮಠದ ರೀತಿಯಲ್ಲೆ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿಗೆ ತರಬೇಕೆಂದು ವಿಶ್ವಹಿಂದೂ ಪರಿಷತ್ ಒತ್ತಾಯಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಶರಣ್ ಕುಮಾರ್ ಪಂಪವೆಲ್ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರ ಶೃಂಗೇರಿ ಶ್ರೀ ಶಂಕರಮಠದವರು ವಸ್ತ್ರ ಸಂಹಿತೆ ಯನ್ನು ಜಾರಿ ಮಾಡ್ದಿದು ಕ್ಷೇತ್ರಕ್ಕೆ ಬರುವವರು ಹಿಂದೂ ಸಂಪ್ರದಾಯದಂತೆ ಉಡುಗೆ ತೊಡುಗೆ ಧರಿಸಿ ಬರಬೇಕು ಎಂದು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ .ಇವರ ನಿರ್ಧಾರವನ್ನು ವಿಶ್ವ ಹಿಂದೂ ಪರಿಷದ್ ಸ್ವಾಗತಿಸುತ್ತದೆ .
ಶೃಂಗೇರಿ ಮಠದ ಈ ವಸ್ತ್ರ ಸಂಹಿತೆಯ ಮಾದರಿಯಲ್ಲಿ ಮುಂಬರುವ ದಿನಗಳಲ್ಲಿ ಕರ್ನಾಟಕದ ಎಲ್ಲಾ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಒಳಪಟ್ಟ ಎಲ್ಲ ದೇವಸ್ಥಾನಗಳಲ್ಲಿ ಆಗಮಿಸುವ ಭಕ್ತರಿಗೆ ಧಾರ್ಮಿಕ ವಸ್ತ್ರ ಸಂಹಿತೆಯನ್ನು ಸಮಸ್ತ ಹಿಂದೂ ಸಮಾಜದ ಪರವಾಗಿ ವಿಶ್ವ ಹಿಂದೂ ಪರಿಷದ್ ರಾಜ್ಯ ಎಲ್ಲ ಧಾರ್ಮಿಕ ಕ್ಷೇತ್ರ ಗಳಿಗೆ ಹಾಗು ದತ್ತಿ ಇಲಾಖೆಗೆ ಸಂಬಂಧ ಪಟ್ಟ ದೇವಸ್ಥಾನಗಳಿಗೆ ಜಾರಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ