Connect with us

BANTWAL

ಮಂಗಳೂರಿಗೆ ಆಗಮಿಸಿದ RSS ವರಿಷ್ಠ,ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಪಾಲ್ಗೊಂಡ ಡಾ. ಮೋಹನ್‌ಜಿ ಭಾಗವತ್‌..

ಬಂಟ್ವಾಳ: ಕಲ್ಲಡ್ಕ ಶಾಲಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆರ್‌ಎಸ್‌ಎಸ್‌ನ ಸರಸಂಘ ಚಾಲಕ್‌ ಡಾ.ಮೋಹನ್‌ಜಿ ಭಾಗವತ್‌ (mohan bhagwat) ಅವರು ಇಂದು  ಮಂಗಳೂರಿಗೆ ಆಗಮಿಸಿದರು. ದಕ್ಷಿಣ ಕನ್ನಡ ಬಂಟ್ವಾಳ ಕಲ್ಲಡ್ಕ  ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಸಾಹಸಮಯ ಪ್ರದರ್ಶನ ಗಳನ್ನೊಳಗೊಂಡ 2024ನೇ ಸಾಲಿನ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ವಿದ್ಯಾಕೇಂದ್ರದ ಸ್ಥಾಪಕ ಕಾರ್ಯದರ್ಶಿ, ಆರ್‌ಎಸ್‌ಎಸ್ ಹಿರಿಯ ಮುಖಂಡರಾದ ಡಾ, ಪ್ರಭಾಕರ್ ಭಟ್ ಅವರು ಡಾ. ಮೋಹನ್ ಭಾಗವತ್ ಅವರನ್ನು ಸ್ವಾಗತಿಸಿ ವಿದ್ಯಾ ಕೇಂದ್ರದ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು.

ಡಾ. ಮೋಹನ್ ಭಾಗವತ್ ಆಗಮನದ ಹಿನ್ನೆಲೆಯಲ್ಲಿ ಮಂಗಳೂರು, ಬಂಟ್ವಾಳ ಮತ್ತು ಕಾರ್ಯಕ್ರಮ ನಡೆಯುವ ಕಲ್ಲಡ್ಕ ಪರಿಸರದಲ್ಲಿ  ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು  ನೇತೃತ್ವ ವಹಿಸಿದ್ದಾರೆ. ಡಾ. ಮೋಹನ್ ಭಾಗವತ್‌ ಅವರು ವಿಶೇಷ ಭದ್ರತಾ ವ್ಯವಸ್ಥೆ (Z+)ಯನ್ನು ಹೊಂದಿದ್ದು ಕೇಂದ್ರದ ಅರೆಸೇನಾಪಡೆ  ಸಿಐಎಸ್‌ಎಫ್‌ ಕೂಡ ಕಲ್ಲಡ್ಕದಲ್ಲಿದ್ದು ಭದ್ರತೆಯ ಜವಾಬ್ದಾರಿ ಹೊತ್ತುಕೊಂಡಿದೆ.

ಇದಕ್ಕೂ ಮುನ್ನ  ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಾ| ಭಾಗವತ್‌ ಅವರನ್ನು ಸಂಘದ ಪ್ರಾಂತ ಪ್ರಚಾರಕರಾದ ಗುರುಪ್ರಸಾದ್‌, ಪ್ರಾಂತ ಸಹ ಕಾರ್ಯವಾಹ ಪಿ.ಎಸ್‌.ಪ್ರಕಾಶ್‌ ಮತ್ತಿತರ ಹಿರಿಯರು ಸ್ವಾಗತಿಸಿದರು. ಬಳಿಕ  ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನಕ್ಕೆ ಆಗಮಿಸಿ ಸಂಘದ ಹಿರಿಯರೊಂದಿಗೆ ಮಾತುಕತೆ ನಡೆಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *