LATEST NEWS
ಡಾ ಮೋಹನ್ ಭಾಗವತ್ ಗೆ ಹಿಂದೂ ಸಮ್ರಾಟ್ ಗೌರವ ದೊಂದಿಗೆ “ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ” ಪ್ರದಾನ
ಉಡುಪಿ ಡಿಸೆಂಬರ್ 09: ಕರಾವಳಿ ಪ್ರವಾಸದಲ್ಲಿ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಉಡುಪಿಯಲ್ಲಿ ಹಿಂದು ಸಾಮ್ರಾಟ್ ಎಂಬ ಬಿರುದು ಹಾಗೂ ಶ್ರೀ ಕೃಷ್ಣ ಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಮೋಹನ್ ಭಾಗವತ್ ಅವರು ಉಡುಪಿ ಜಿಲ್ಲೆಗೆ ಭಾನುವಾರ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಗೀತಾಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಹಿಂದು ಸಾಮ್ರಾಟ್ ಎಂಬ ಬಿರುದು ಹಾಗೂ ಶ್ರೀ ಕೃಷ್ಣ ಗೀತಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಶ್ರೀಕೃಷ್ಣ ದರ್ಶನದ ಬಳಿಕ ಡಾ ಭಾಗವತ್ ಗೀತಾಮಂದಿರಕ್ಕೆ ಭೇಟಿ ನೀಡಿದರು .ಶ್ರೀಗಳು ಅಲ್ಲಿನ ಗೀತಾಶಿಲಾ ಲೇಖನ ಧ್ಯಾನ ಮಂದಿರ ,ವಾದಿರಾಜ ಸಂಶೋಧನ ಮಂದಿರಗಳನ್ನು ಪರಿಚಯಿಸಿ ನಡೆಸುತ್ತಿರುವ ಚಟುವಟಿಕೆಗಳನ್ನು ವಿವರಿಸಿದರು. ತಮ್ಮ ಚತುರ್ಥ ಪರ್ಯಾಯಾವಧಿಯ ಅತ್ಯಂತ ದೂರದೃಷ್ಟಿಯ ಕೋಟಿ ಗೀತಾಲೇಖನ ಯಜ್ಞದ ಕುರಿತೂ ವಿವರಿಸಿದರು.
ಸಂಘದ ಹಿರಿಯ ಮುಖಂಡ ಮುಕುಂದ ಜೀ ,ಉಡುಪಿಯ ಪ್ರಮುಖ್ ನರತನ್ ಶೆಣೈ,ಮಠದ ದಿವಾನರಾದ ಎಂ ನಾಗರಾಜ ಆಚಾರ್ಯ ,ಮಟ್ಟಿ ಲಕ್ಷ್ಮಿನಾರಾಯಣ ರಾವ್,ಪ್ರಮೋದ್ ಸಾಗರ್ ಸಂತೋಷ್ ಶೆಟ್ಟಿ ,,ಶ್ರೀ ಮಠದ ವೈದಿಕ ವಿದ್ವಾಂಸರು,ಗಣ್ಯ ನಾಗರಿಕರು ಮೊದಲಾದವರು ಭಾಗವಹಿಸಿದ್ದರು.
ಆರಂಭದಲ್ಲಿ ಮಠದ ಮುಂಭಾಗದಲ್ಲಿ ಭಾಗವತ್ ಅವರನ್ನು ವಾದ್ಯ, ಚಂಡೆವಾದನ ಮಂತ್ರಘೋಷ ಸಹಿತ ಮಠದ ಸಾಂಪದ್ರದಾಯಿಕ ಗೌರವಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು