Connect with us

    KARNATAKA

    ಯೂಟ್ಯೂಬ್‌ ನಲ್ಲಿ ನನಗೆ ಬರೋ ಹಣ ಇಷ್ಟೇ ಎಂದ ಡಾ. ಬ್ರೋ

    ಬೆಂಗಳೂರು ಅಗಸ್ಟ್ 25: ಕನ್ನಡದ ಖ್ಯಾತ ಯುಟ್ಯೂಬರ್ ಡಾ. ಬ್ರೋ ತಮ್ಮ ಯುಟ್ಯೂಬ್ ಆದಾಯವನ್ನು ರಿವಿಲ್ ಮಾಡಿದ್ದಾರೆ. ನನಗೆ ತಿಂಗಳಿಗೆ 1 ಲಕ್ಷ ಆದಾಯ ಬರುತ್ತದೆ ಎಂದು ಹೇಳಿದ್ದಾರೆ.


    ಕನ್ನಡದ ಖ್ಯಾತ ಯುಟ್ಯೂಬರ್ ಆಗಿರುವ ಡಾ. ಬ್ರೋ ‌ ದೇಶ – ವಿದೇಶ ಸುತ್ತುತ್ತಾ ವಿಡಿಯೋ ಮಾಡುತ್ತಾ ಇರುತ್ತಾರೆ. ಅವರ ಒಂದೊಂದು ವಿಡಿಯೋ ಲಕ್ಷಗಟ್ಟಲೇ ವಿವ್ಸ್ ಪಡೆದಿದೆ. ಹೀಗಾಗಿ ಡಾ. ಬ್ರೋ ತಿಂಗಳಿಗೆ 10 ಲಕ್ಷಕ್ಕೂ ಅಧಿಕ ಹಣ ಗಳಿಸುತ್ತಾರೆ ಎಂದೇ ಎಲ್ಲರೂ ತಿಳಿದಿದ್ದರೂ,. ಇದೀಗ ಡಾ.ಬ್ರೋ ಲೈವ್ ನಲ್ಲಿ ತನ್ನ ಯೂಟ್ಯೂಬ್‌ ಸ್ಟುಡಿಯೋ ತೋರಿಸಿ ತಮ್ಮ ಯೂಟ್ಯೂಬ್‌ ಆದಾಯವನ್ನು (YouTube Income) ಅವರು ರಿವೀಲ್‌ ಮಾಡಿದ್ದಾರೆ.

    ಕಳೆದ ಒಂದು ತಿಂಗಳ ನನ್ನ ಯೂಟ್ಯೂಬ್ ಸಂಬಳ 2 ಸಾವಿರದ 100 ಡಾಲರ್. ಅಂದರೆ 1 ಲಕ್ಷದ 76 ಸಾವಿರ ರೂಪಾಯಿ. ಇಷ್ಟು ಹಣ ಬಂದರೆ ಒಂದು ದೇಶಕ್ಕೆ ಹೋದರೆ ನನಗೆ ಖರ್ಚು ಎಷ್ಟು ಬೀಳುತ್ತದೆ. ಹೋಗಿ ಬರಲು ವಿಮಾನದ ಟಿಕೆಟ್‌ ಬೆಲೆ. ಅಲ್ಲಿ ಉಳಿದುಕೊಳ್ಳಲು ಖರ್ಚು, ಎಡಿಟಿಂಗ್‌ ಕಾಸ್ಟ್‌, ಗೆಜೆಟ್ ಇಎಂಐ ಖರ್ಚು ಎಲ್ಲ ಸೇರಿ 10 -20 ಸಾವಿರ ನನ್ನ ಕೈಗೆ ಬರಬಹುದು. ಇದು ನನ್ನ ಯೂಟ್ಯೂಬ್ ಆದಾಯ, ಜಾಹೀರಾತುಗಳಿಂದಲೂ ಆದಾಯ ಬರುತ್ತದೆ. ಜಾಹೀರಾತು ಹಾಕಿದ ಬಳಿಕ ಅದು ಬರುತ್ತದೆ ಎಂದು ಡಾ. ಬ್ರೋ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply