KARNATAKA
ನೈಜೀರಿಯಾದ ಮಕ್ಕಳಿಗೆ ಕನ್ನಡ ಪಾಠ ಮಾಡಿದ ಯೂಟ್ಯೂಬರ್ ಡಾ. ಬ್ರೋ
ನೈಜಿೀರಿಯಾ ಅಕ್ಟೋಬರ್ 25: ಕನ್ನಡದ ಪ್ರಖ್ಯಾತ ಯೂಟ್ಯೂಬರ್ ಡಾ. ಬ್ರೋ ಇದೀಗ ನೈಜೀರಿಯಾ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಡಾ. ಬ್ರೋ ನೈಜಿರಿಯಾದ ಸ್ಲಂ ಮಕ್ಕಳಿಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಡಾ. ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ಸದ್ಯಕ್ಕೆ ನೈಜೀರಿಯಾ ಪ್ರಸಾದಲ್ಲಿದ್ದಾರೆ. ವಿದೇಶಗಳಲ್ಲಿ ಕನ್ನಡದ ಖ್ಯಾತಿಯನ್ನು ಹೆಚ್ಚಿಸುತ್ತಿರುವ ಗಗನ್ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕನ್ನಡಿಗರ ಮನಸ್ಸನ್ನೂ ಗೆದ್ದಿದೆ.
ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ಕನ್ನಡಿಗರಿಗೆ ಡಾ. ಬ್ರೋ ಈ ವಿಡಿಯೋ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಿದೆ. ನೈಜೀರಿಯಾದ ಅತಿ ದೊಡ್ಡ ಸ್ಲಂ ಪ್ರದೇಶಕ್ಕೆ ಭೇಟಿ ನೀಡಿರುವ ಡಾ. ಬ್ರೋ. ಅಲ್ಲಿನ ಶಾಲೆಯೊಂದಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಮಕ್ಕಳಿಗೆ ನಮ್ಮ ದೇಶ ಹಾಗ ರಾಜ್ಯದ ಬಗ್ಗೆ ಹೇಳಿದ್ದು, ಬಳಿಕ ನಮ್ಮ ಕನ್ನಡ ಭಾಷೆಯನ್ನು ಭಾರತದ ರಾಷ್ಟ್ರ ಭಾಷೆ ಎಂದು ಹೇಳಿ ಮಕ್ಕಳಿಗೆ ಪರಿಚಯ ಮಾಡಿದ್ದಾರೆ. ಬಳಿಕ ಮಕ್ಕಳಿಗೆ ಕನ್ನಡವನ್ನು ಹೇಳಿಕೊಟ್ಟಿದ್ದಾರೆ.
ಬ್ರೋ ʼನಾನೀಗ ನಿಮಗೆ ಇಂಡಿಯಾದ ನ್ಯಾಷನಲ್ ಲ್ಯಾಂಗ್ವೇಜ್ ಹೇಳಿಕೊಡ್ತೀನಿʼ ಎಂದು ಹೇಳ್ತಾರೆ. ಬಹುಶಃ ಹಿಂದಿ ಹೇಳಿಕೊಡಬಹುದು ಎಂದು ನೀವಂದುಕೊಂಡಿದ್ದರೆ, ತಪ್ಪು. ʼಅ, ಆ, ಇ, ಈʼ ಎಂದು ಕನ್ನಡದ ಅಕ್ಷರಮಾಲೆಯನ್ನು ಅಂ, ಅಃ ವರೆಗೆ ಹೇಳಿಕೊಡ್ತಾರೆ.
ಡಾ. ಬ್ರೋನ ಈ ನಡವಳಿಕೆ ಕನ್ನಡದ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ʼʼನೈಜೀರಿಯಾಗೆ ಹೋಗಿ ಕನ್ನಡ ಬಾವುಟ ಹಾರಿಸಿದ್ದೀಯಲ್ಲ ಗುರು” “ಕನ್ನಡವನ್ನು ಭಾರತದ ರಾಷ್ಟ್ರಭಾಷೆ ಅಂತ ಕರೆದಿದ್ದಕ್ಕೆ ಥ್ಯಾಂಕ್ ಬ್ರೋ” ಎಂದೆಲ್ಲ ನೆಟ್ಟಿಗರು ಧನ್ಯವಾದ ಹೇಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗ್ತಿದೆ.
One second shock ಕೊಟ್ಬಿಟ್ಟಲ್ಲ ದೇವ್ರು #Drbro
ನಮ್ಮ ರಾಷ್ಟ್ರ ಬಾಷೆ ಕನ್ನಡ ❤️ pic.twitter.com/ULVRaKHPUQ— (@Sharu_Tweetz) October 25, 2024