Connect with us

    UDUPI

    ಎಪ್ರಿಲ್ ನಲ್ಲಿ ಡಬಲ್ ಕೋರ್ಟ್ ಒಳಾಂಗಣ ಟೆನಿಸ್ ಕ್ರೀಡಾಂಗಣಕ್ಕೆ ಚಾಲನೆ – ಪ್ರಮೋದ್ ಮಧ್ವರಾಜ್

    ಎಪ್ರಿಲ್ ನಲ್ಲಿ ಡಬಲ್ ಕೋರ್ಟ್ ಒಳಾಂಗಣ ಟೆನಿಸ್ ಕ್ರೀಡಾಂಗಣಕ್ಕೆ ಚಾಲನೆ – ಪ್ರಮೋದ್ ಮಧ್ವರಾಜ್

    ಉಡುಪಿ ಮಾರ್ಚ್ 1:  ದೇಶದಲ್ಲಿಯೇ ಎರಡನೇ ಡಬಲ್ ಕೋರ್ಟ್‍ನ ಒಳಾಂಗಣ ಟೆನಿಸ್ ಕ್ರೀಡಾಂಗಣ ಎಪ್ರಿಲ್ ಮೊದಲ ವಾರದಲ್ಲಿ ಶುರುವಾಗಲಿದೆ ಎಂದು ಮೀನುಗಾರಿಕೆ, ಯುವಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

    ಅವರು ಇಂದು ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು ಈಜುಕೊಳದ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.

    ಈಜುಕೊಳವನ್ನು ಈಗಾಗಲೇ ಎರಡು ಕೋಟಿ ರೂಗಳಲ್ಲಿ ನಿರ್ಮಾಣ ಮಾಡಲಾಗಿದ್ದು, ಈಗ 1.50 ಕೋಟಿ ರೂಗಳಲ್ಲಿ ಮತ್ತೆ ದುರಸ್ಥಿಗೊಳಿಸಿ ಗ್ಯಾಲರಿ ವ್ಯವಸ್ಥೆಯನ್ನು ಮಾಡಲಾಗುತ್ತದೆ. 1.20 ಲಕ್ಷದಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಏರ್‍ಕಂಡೀಶನ್ ಅಳವಡಿಸಲಾಗುತ್ತದೆ ಎಂದರು. ಹಾಗೂ 1.500 ಕೋಟಿ ಅನುದಾನದಲ್ಲಿ ಹೈಟೆಕ್ ಜಿಮ್ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ ಎಂದರು.

    ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಲು ನಾಲ್ಕು ಜನ ಪರಿಣತರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿಲಾಗಿದೆ. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಕ್ರೀಡಾ ಕಾಮಗಾರಿಯ ಸಂಪೂರ್ಣ ಗುಣಮಟ್ಟವನ್ನು ನೋಡಿಕೊಳ್ಳುತ್ತಾರೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply