LATEST NEWS
ಡಬ್ಬಲ್ ರೈಡಿಂಗ್ ನಿರ್ಬಂಧದ ಆದೇಶ ವಾಪಾಸ್….!!
ಮಂಗಳೂರು ಅಗಸ್ಟ್ 04: ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪುರುಷ ಸಹ ಸವಾರ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಮಂಗಳೂರು ಪೊಲೀಸ್ ಕಮಿಷನರ್ ವಾಪಸ್ ಪಡೆದಿದ್ದಾರೆ.
ಈ ಮೊದಲು ಎಡಿಜಿಪಿ ಅಲೋಕ್ ಕುಮಾರ್ ರಾತ್ರಿ ಸಂದರ್ಭ ದ್ವಿಚಕ್ರ ವಾಹನಗಳಲ್ಲಿ ಪುರುಷರಿಗೆ ಡಬ್ಬಲ್ ರೈಡಿಂಗ್ ಗೆ ಅವಕಾಶವನ್ನು ನಿರ್ಬಂಧಿಸಿದ್ದರು. ಆದರೆ ಈ ಆದೇಶಕ್ಕೆ ಸಂಬಂಧಿಸಿದಂತೆ ಆಕ್ರೋಶ ಕೇಳಿ ಬಂದ ಹಿನ್ನಲೆ ಮಂಗಳೂರು ಪೊಲೀಸ್ ಆಯುಕ್ತರು ಈ ಆದೇಶವನ್ನು ಹಿಂಪಡೆದಿದ್ದಾರೆ.
ಜಿಲ್ಲೆಯಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧವನ್ನು ಪರಿಷ್ಕರಿಸಿದ್ದು, ರಾತ್ರಿ 9.00 ರಿಂದ ಬೆಳಗ್ಗೆ 6:00 ವರೆಗೆ ಮಾರ್ಪಾಡುಗೊಳಿಸಲಾಗಿದೆ. ಇನ್ನು ಸರಣಿ ಹತ್ಯೆಗಳಿಂದ ಕಂಗೆಟ್ಟಿದ್ದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಸರಣಿ ಹತ್ಯೆಗಳು ನಡೆದ ಪ್ರದೇಶಗಳಿಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.