LATEST NEWS
ನಾಳೆಯಿಂದ ಫಾಸ್ಟ್ಯಾಗ್ ಇಲ್ಲ ಅಂದ್ರೆ ಡಬಲ್ ಟೋಲ್! ಸರ್ಕಾರದ ಹೊಸ ಆದೇಶ
ನವದೆಹಲಿ, ಫೆಬ್ರವರಿ 14: ನೀವು ನಿಮ್ಮ ಗಾಡಿಗೆ ಫಾಸ್ಟ್ಯಾಗ್ ಹಾಕಿಸಿದ್ದೀರಾ? ಇಲ್ಲವಾದರೆ ನಾಳೆಯಿಂದ ಡಬಲ್ ಟೋಲ್ ಕಟ್ಟಲು ನೀವು ಸಿದ್ಧರಾಗಿ. ಏಕೆಂದರೆ ಕೇಂದ್ರ ಸರ್ಕಾರವು ಈ ಕುರಿತಾಗಿ ಹೊಸ ಆದೇಶವೊಂದನ್ನು ಪ್ರಕಟಿಸಿದ್ದು, ನಾಳೆಯಿಂದ ಫಾಸ್ಟ್ಯಾಗ್ ಕಡ್ಡಾಯ ಎನ್ನುವ ನಿಯಮ ಜಾರಿಯಲ್ಲಿರಲಿದೆ.
ನಾಳೆಯಿಂದ ಎಲ್ಲ ಹೆದ್ದಾರಿಗಳ ಟೋಲ್ ಲೇನ್ಗಳನ್ನು ಫಾಸ್ಟ್ಯಾಗ್ ಲೇನ್ಗಳಾಗಿ ಬದಲಾಯಿಸಲಾಗುವುದು. ಈಗಾಗಲೇ ಎಲ್ಲ ಟೋಲ್ಗಳಲ್ಲಿ ಲೇನ್ಗಳನ್ನು ಫಾಸ್ಟ್ಯಾಗ್ ಲೇನ್ಗಳಾಗಿ ಬದಲಾಗಿಸಲಾಗಿದ್ದು, ಕೇವಲ ಒಂದು ಲೇನ್ನ್ನು ಫಾಸ್ಟ್ಯಾಗ್ ಇಲ್ಲದವರಿಗಾಗಿ ಬಿಡಲಾಗಿತ್ತು. ಆದರೆ ಫೆಬ್ರವರಿ 15ರ ಮಧ್ಯ ರಾತ್ರಿಯಿಂದ ಎಲ್ಲ ಲೇನ್ಗಳು ಫಾಸ್ಟ್ಯಾಗ್ ಲೇನ್ಗಳಾಗಿ ಕೆಲಸ ಮಾಡಲಿವೆ.
ಒಂದು ವೇಳೆ ನೀವು ಇನ್ನೂ ಫಾಸ್ಟ್ಯಾಗ್ ಹಾಕಿಸಿಕೊಂಡಿಲ್ಲ ಎನ್ನುವುದಾದರೆ, ನಾಳೆ ಮಧ್ಯ ರಾತ್ರಿಯಿಂದ ಪ್ರತಿ ಟೋಲ್ನಲ್ಲಿ ಟೋಲ್ ಹಣದ ದುಪ್ಪಟ್ಟು ಹಣವನ್ನು ಶುಲ್ಕವನ್ನಾಗಿ ಕಟ್ಟಿ ಹೋಗಬೇಕಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಅನ್ವಯ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.