DAKSHINA KANNADA
ಶಿರಾಢಿ ಘನ ವಾಹನ ನಿರ್ಬಂಧ ಆದೇಶಕ್ಕೆ ಕ್ಯಾರೆ ಅನ್ನದ ಸವಾರರು
ಶಿರಾಢಿ ಘನ ವಾಹನ ನಿರ್ಬಂಧ ಆದೇಶಕ್ಕೆ ಕ್ಯಾರೆ ಅನ್ನದ ಸವಾರರು
ಪುತ್ತೂರು ಜುಲೈ 16: ವಾಹನ ಸಂಚಾರಕ್ಕೆ ನಿನ್ನೆಯಿಂದ ಮುಕ್ತವಾಗಿರುವ ಶಿರಾಡಿಘಾಟ್ ರಸ್ತೆಯಲ್ಲಿ ಘನ ವಾಹನಗಳಿಗೆ ನಿಶೇಧವಿದ್ದರೂ , ಎಲ್ಲಾ ವಾಹನಗಳು ಇದೀಗ ಈ ರಸ್ತೆಯ ಮೂಲಕವೇ ಸಾಗುತ್ತಿವೆ.
ಘಾಟ್ ರಸ್ತೆಯ ತಡೆಗೋಡೆ ಕಾಮಗಾರಿ ಮುಗಿದ ಬಳಿಕವೇ ಘನ ವಾಹನಗಳಿಗೆ ಪ್ರವೇಶ ಎಂದು ಅಧಿಕಾರಿಗಳು ಆದೇಶ ಹೊರಡಿಸಿದ್ದರೂ ವಾಹನಗಳು ಮಾತ್ರ ಇದೇ ರಸ್ತೆಯಲ್ಲಿ ಸಾಗುತ್ತಿವೆ.
ಹಾಗಾದರೆ ಅಧಿಕಾರಿಗಳು ಭಾನುವಾರ ನಡೆಸಿದ ಸಭೆಗೆ ಯಾವುದೇ ಮಾನ್ಯತೆಯಿಲ್ಲವೇ ಅಥವಾ ಕೇವಲ ತೋರ್ಪಡಿಕೆಗಾಗಿ ಆ ಸಭೆಯನ್ನು ಕರೆದಿದ್ದರೇ ಎನ್ನುವ ಸಂಶಯ ಇದೀಗ ಕಾಡಲಾರಂಭಿಸಿದೆ.
ನಿನ್ನೆ ಶಿರಾಢಿ ಘಾಟ್ ನ್ನು ಉದ್ಘಾಟನೆ ನಡೆಸಿದ ಬಳಿಕ ಶಿರಾಢಿಯ ನಿರೀಕ್ಷಣಾ ಮಂದಿರದಲ್ಲಿ ಸಭೆ ನಡೆಸಿದ ಸಟಿವ ಯು.ಟಿ ಖಾದರ್ ,ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮತ್ತು ಎಸ್ ಪಿ ಡಾ. ಬಿ.ಆರ್ ರವಿಕಾಂತೇ ಗೌಡ 15 ದಿನಗಳ ಕಾಲ ಶಿರಾಢಿ ಘಾಟ್ ನಲ್ಲಿ ಘನ ವಾಹನಗಳ ಸಂಚಾರಕ್ಕೆ ನಿರ್ಭಂದ ಹೇರುವ ತೀರ್ಮಾನ ಕೈಗೊಂಡಿದ್ದರು.
ಆದರೆ ಇಂದು ನಡೆದಿದ್ದೆ ಬೇರೆ, ಸಚಿವರು, ಜಿಲ್ಲಾಧಿಕಾರಿಗಳ ಆದೇಶಕ್ಕೆ ಕ್ಯಾರೆ ಅನ್ನದೇ ಇಂದು ಶಿರಾಢಿಯಲ್ಲಿ ಎಲ್ಲಾ ವಾಹನಗಳು ಸಂಚಾರ ನಡೆಸಿದವು.