LATEST NEWS
ಕೊರೋನ ಲಕ್ಷಣ ಕಂಡುಬಂದರೆ ಅಸಡ್ಡೆ ಮಾಡಬೇಡಿ: ಜಿಲ್ಲಾಧಿಕಾರಿ ಜಿ ಜಗದೀಶ್ ಮನವಿ
ಉಡುಪಿ, ಮೇ 17: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ 34 ಶೇಕಡಾ ಇದೆ, ಕೆಲವು ದಿನ 37 ಶೇಕಡಾದಷ್ಟು ಪಾಸಿಟಿವಿಟಿ ರೇಟ್ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಒಟ್ಟು 63 ಕಂಟೋನ್ಮೆಂಟ್ ಜೋನ್ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಟೆಸ್ಟ್ ಕಡಿಮೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ.
ಪ್ರತಿದಿನ ಎರಡುವರೆ ಸಾವಿರದಿಂದ 3000 ಟೆಸ್ಟ್ ಗಳನ್ನು ಮಾಡುತ್ತಿದ್ದೇವೆ. ಸಾರ್ವಜನಿಕರಲ್ಲಿ ನಾನು ಮನವಿ ಮಾಡುತ್ತಿದ್ದೇನೆ
ಮನೆಯಲ್ಲಿ ಕೂತು ಯಾರು ಸ್ವಯಂ ಚಿಕಿತ್ಸೆ ಮಾಡಬೇಡಿ.
ಯುವಕರು ಕೂಡ ಕೊರೋನಕ್ಕೆ ಬಲಿಯಾಗುತ್ತಿರುವುದು ನೋಡುತ್ತಿದ್ದೇವೆ. ಕೊರೋನ ರೋಗದ ಲಕ್ಷಣಗಳು ಕಂಡುಬಂದರೆ ಯಾರು ಅಸಡ್ಡೆ ಮಾಡಬೇಡಿ, ಸರಕಾರಿ ಆಸ್ಪತ್ರೆಗೆ ಬಂದು ಟೆಸ್ಟ್ ಮಾಡಿಸಿ ಚಿಕಿತ್ಸೆ ಪಡೆಯಿರಿ ಎಂದು ಉಡುಪಿ ಡಿಸಿ ಜಿ ಜಗದೀಶ್ ಮನವಿ ಮಾಡಿದ್ದಾರೆ.